ಬೆಂಗಳೂರು, ಜು 13 (Daijiworld News/MSP): ಕಲರ್ ಪ್ರಿಂಟರ್ ಮೂಲಕ ಖೋಟಾನೋಟು ಮುದ್ರಿಸಿ ಅದನ್ನು ಚಲಾವಣೆ ಮಾಡುತ್ತಿದ್ದ ಆಫ್ರಿಕಾ ಪ್ರಜೆಯೊಬ್ಬನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು ಆರೋಪಿಯಿಂದ 2 ಸಾವಿರ ರೂಪಾಯಿ ಮುಖಬೆಲೆಯ 33.70 ಲಕ್ಷ ರೂ. ಖೋಟಾನೋಟು ವಶಕ್ಕೆ ಪಡೆದಿದ್ದಾರೆ.

ಬಂಧಿತನನ್ನು ಮಧ್ಯ ಆಪ್ರಿಕಾದ ಕ್ಯಾಮರೂನ್ ದೇಶದ ಡಿಯೊಡೊನೆ ಕ್ರಿಸ್ಪೊಲ್ (35) ಎಂದು ಗುರುತಿಸಲಾಗಿದೆ. ಈತ ಬಾಣಸವಾಡಿ ಸುಬ್ಬಯ್ಯನ ಪಾಳ್ಯದಲ್ಲಿ ವಾಸವಾಗಿದ್ದ. 2017ರಲ್ಲಿ ಪ್ರವಾಸಿ ವೀಸಾದ ಮೂಲಕ ಭಾರತಕ್ಕೆ ಆಗಮಿಸಿದ್ದ ಈತ ವೀಸಾವನ್ನು ನವೀಕರಣ ಮಾಡದೆ ಇಲ್ಲೇ ಅಕ್ರಮವಾಗಿ ವಾಸವಾಗಿದ್ದ.
ಇಲ್ಲಿನ ಹಣವನ್ನು ಕಲರ್ಪ್ರಿಂಟರ್ ಮೂಲಕ ನಕಲಿ ಮುದ್ರಣ ಮಾಡಿ ಮಾರುಕಟ್ಟೆಯಲ್ಲಿ ಚಲಾವಣೆ ಮಾಡುತ್ತಿದ್ದ.
ಈತನಿಂದ 33.70 ಲಕ್ಷ ನಕಲಿ ಕರೆನ್ಸಿ ನೋಟುಗಳು, 2 ಕಲರ್ ಪ್ರಿಂಟರ್, ಎ 4 ಗಾತ್ರದ ಪೇಪರ್ ಶೀಟ್ಗಳು, ಒಂದು ಸ್ಟಿಕ್ಕರ್ ಕಟ್ಟರ್, ಒಂದು ಸ್ಕೇಲ್, ಸೆಲ್ಲೊ ಟೇಪ್, ಒಂದು ಮೊಬೈಲ್ ಮತ್ತು ಪಾಸ್ಪೋರ್ಟ್ ಅನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಖೋಟಾನೋಟು ಮುದ್ರಿಸಿ, ಚಲಾವಣೆ ಮಾಡುತ್ತಿದ್ದ ಕೃತ್ಯದಲ್ಲಿ ಇನ್ನು ಹಲವರು ತೊಡಗಿಸಿಕೊಂಡಿರುವ ಸಂಶಯ ವ್ಯಕ್ತವಾಗಿದ್ದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.