ಬೆಂಗಳೂರು, ಜು 15 (DaijiworldNews/SM): ರಾಜ್ಯದಲ್ಲಿ ಬಹುಮತ ಇಲ್ಲದ ಸರಕಾರ ಅಧಿಕಾರದಲ್ಲಿದೆ. ಸಿಎಂ ಕುರ್ಚಿಯಲ್ಲಿ ಮುಂದುವರೆಯಲು ಕುಮಾರಸ್ವಾಮಿ ಅನರ್ಹರು. ಜುಲೈ 18ರಂದು ಸಿಎಂ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸಲಾರರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುವಾರದಂದು ಸಿಎಂ ಸದನದಲ್ಲಿ ಭಾಷಣ ಮಾಡಿ ಹೊರ ನಡೆಯಲಿದ್ದಾರೆ. ಬಹುಮತ ಸಾಬೀತುಪಡಿಸಲಾರರು. ಬಳಿಕದ ಕೆಲವೇ ದಿನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ. ನಾನು ರಾಜ್ಯದ ಜನತೆಗೆ ಉತ್ತಮ ಅಧಿಕಾರ ನೀಡಲಿದ್ದೇವೆ. ಪ್ರಸ್ತುತ ದೋಸ್ತಿ ಸರಕಾರದ ಆಡಳಿತದಿಂದ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ.
ಅಲ್ಲದೆ, ದೋಸ್ತಿ ಸರಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇದೇ ಕಾರಣದಿಂದಾಗಿ ರಾಜ್ಯದ ಜನತೆಯ ನೋವು ಅರಿತುಕೊಂಡಿರುವ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಜನಪರವಾದ ಆಡಳಿತವನ್ನು ನೀಡಲಿದ್ದೇವೆ ಎಂದರು.