ನವದೆಹಲಿ, ಜು 16(DaijiworldNews/SM): ಉಡುಪಿಯ ಪೇಜಾವರ ಮಠದ ಹಿರಿಯ ಸ್ವಾಮೀಜಿ ಶ್ರೀ ವಿಶ್ವೇಶತೀರ್ಥಶ್ರೀಪಾದರು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.
ಗುರುಪೂರ್ಣಿಮೆಯಾ ದಿನದಂದು ಪೇಜಾವರ ಶ್ರೀಗಳ ಭೇಟಿ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಪೇಜಾವರ ಶ್ರೀಗಳ ಭೇಟಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಸಂತಸಗೊಂಡಿದ್ದು, ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಅಲ್ಲದೆ ಪೇಜಾವರ ಶ್ರೀಗಳ ಭೇಟಿಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಈ ದಿನ ಬಹಳ ಮಹತ್ವದ ದಿನವಾಗಿದೆ. ಇಂದು ನನ್ನ ಪಾಲಿಗೆ ಇನ್ನಷ್ಟು ಮಹತ್ವವನ್ನು ತಂದುಕೊಟ್ಟಿದೆ ಎಂಬುವುದಾಗಿ ಪ್ರಧಾನಿ ಮೋದಿಯವರು ಖುಷಿಯ ಕ್ಷಣಗಳನ್ನು ಸಾಲುಗಳ ಮೂಲಕ ಬಣ್ಣಿಸಿದ್ದಾರೆ. ಪೇಜಾವರ ಶ್ರೀಗಳು ನನ್ನನ್ನು ಭೇಟಿಯಾಗಿರುವುದು ನನ್ನ ಸೌಭಾಗ್ಯವೆಂದು ಪ್ರಧಾನಿ ಮೋದಿಯವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.