ಬೆಂಗಳೂರು, ಜು17(Daijiworld News/SS): ನ್ಯಾಯಾಲಯದಿಂದ ನಮ್ಮ ಪರ ತೀರ್ಪು ಬರಲಿದೆ ಎನ್ನುವ ಬಲವಾದ ವಿಶ್ವಾಸವಿದೆ ಎಂದು ಸಚಿವ ಡಿ ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ನಿಂದ ನಮಗೆ ಅನ್ಯಾಯವಾಗುವುದಿಲ್ಲ. ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುತ್ತೇವೆ. ನ್ಯಾಯಾಲಯದಿಂದ ನಮ್ಮ ಪರ ತೀರ್ಪು ಬರಲಿದೆ ಎನ್ನುವ ಬಲವಾದ ವಿಶ್ವಾಸವಿದೆ ಎಂಬ ಆಶಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡು ಶಾಸಕರು ಸ್ಪೀಕರ್ಗೆ ರಾಜೀನಾಮೆ ಸಲ್ಲಿಸಿದ್ದರು. ಹಿಂದೆ ಶಾಸಕರು ಸಲ್ಲಿಸಿದ್ದ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದು ಸ್ಪೀಕರ್ ಅವರ ರಾಜೀನಾಮೆಗಳನ್ನು ತಿರಸ್ಕರಿಸಿದ್ದರು. ರಾಜೀನಾಮೆ ವಿಷಯ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಎಂದು ತಿಳಿಸಿದರು.
ಬಿಜೆಪಿ ನಾಯಕರು ನಿಮ್ಮನ್ನು ಯಾಮಾರಿಸುತ್ತಿದ್ದಾರೆ. ಇದನ್ನೆಲ್ಲ ಅರ್ಥ ಮಾಡಿಕೊಳ್ಳಿ. ನಾವೆಲ್ಲ ಅಣ್ಣ-ತಮ್ಮಂದಿರು ಇದ್ದಂತೆ. ವಾಪಸ್ ಬಂದು ಬಿಡಿ ಎಂದು ಮನವಿ ಮಾಡಿದ್ದಾರೆ.
ಮೈತ್ರಿ ಸರ್ಕಾರದಿಂದ ಯಾವುದೇ ತಪ್ಪು ನಡೆದಿಲ್ಲ, ಬಿಜೆಪಿ ನಾಯಕರು ನಿಮ್ಮನ್ನು ಯಾಮಾರಿಸುತ್ತಿದ್ದಾರೆ. ಅವರನ್ನು ನಂಬಿ ನಿಮ್ಮ ರಾಜಕೀಯ ಜೀವನ ನೀವೇ ಹಾಳು ಮಾಡಿಕೊಳ್ಳಬೇಡಿ. ಅತೃಪ್ತ ಶಾಸಕರು ಇದನ್ನು ಅರ್ಥಮಾಡಿಕೊಳ್ಳಬೇಕು. ಇದು ನಿಮ್ಮ ಮನೆ, ನೀವೇ ಕಟ್ಟಿದ ಮನೆ, ವಾಪಸ್ ಬನ್ನಿ. ನಾವು ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.