ಬೆಂಗಳೂರು,ಜ. 12 (DaijiworldNews/AK): ಒಂದೇ ದಿನದಲ್ಲಿ ಒಂದು ಗ್ರಾಂ ಶುದ್ಧ ಚಿನ್ನದ ಬೆಲೆ 14,313 ರೂಪಾಯಿಗೆ ಏರಿಕೆ ಕಂಡಿದೆ. . ಬೆಂಗಳೂರಿನಲ್ಲಿ ಶುದ್ಧ ಚಿನ್ನ ದರ 69 ರೂ. ಏರಿಕೆ ಕಂಡು ಚಿನ್ನದ ಬೆಲೆ 14,215 ರೂ.ಗೆ ತಲುಪಿದೆ. ಜನವರಿ 9ರಿಂದ ನಿರಂತರವಾಗಿ ಚಿನ್ನದ ಬೆಲೆ ಏರುತ್ತಿದೆ.

ಸೋಮವಾರ ಜನವರಿ 12ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,215 (+69) ರೂ. ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,030(+155) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,661 (+127) ರೂ. ಬೆಲೆಗೆ ತಲುಪಿದೆ.
2026 ಜನವರಿ 12 ಸೋಮವಾರದಂದು ವಿವಿಧ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ, 14,215ರೂ. ಇಂದು 69 ರೂ. ಏರಿಕೆ ಆಗಿದೆ. 22 ಕ್ಯಾರೆಟ್ 1 ಗ್ರಾಂ ಬೆಲೆ 13,030 ರೂ. ಇದ್ದು, ಇಂದು 155 ರೂ ಹೆಚ್ಚಳ ಆಗಿದೆ. ಹಾಗೆಯೇ 18 ಕ್ಯಾರೆಟ್ 1 ಗ್ರಾಂ ಬೆಲೆ 10,166 ರೂ. ಇದ್ದು, ಸೋಮವಾರ 127 ರೂ. ಏರಿಕೆಯಾಗಿದೆ.
ಬೆಳ್ಳಿ ಬೆಲೆ ಇಂದು ಸೋಮವಾರ 10 ರೂ. ಏರಿಕೆಯಾಗಿದ್ದು, ಒಂದು ಗ್ರಾಂಗೆ 270 ರೂ. ಆಗಿದೆ. ಒಂದು ಕೆಜಿ ಬೆಳ್ಳಿಯ ಬೆಲೆ 2,70,000 ರೂ. ಇದೆ.