ಶ್ರೀಹರಿಕೋಟಾ, ಜ. 12 (DaijiworldNews/AA): ಇಸ್ರೋದ ಮಹತ್ವಾಕಾಂಕ್ಷೆಯ PSLV C62 ರಾಕೆಟ್ ಉಡಾವಣೆಯ ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಕಂಡುಬಂದು ರಾಕೆಟ್ ಪಥ ಬದಲಾಯಿಸಿದ್ದು, ಪಿಎಸ್ಎಲ್ವಿ ಮಿಷನ್ ಉಡಾವಣೆ ವಿಫಲವಾಗಿದೆ.

ಡಿಆರ್ಇಒದ ವ್ಯೂಹಾತ್ಮಕ ಉದ್ದೇಶಗಳಿಗಾಗಿ ಅಭಿವೃದ್ಧಿಪಡಿಸಲಾಗಿದ್ದ ಅನ್ವೇಶಾ/EOS – N1 ಹಾಗೂ 14 ಉಪಗ್ರಹಗಳನ್ನು ಹೊತ್ತುಕೊಂಡು ಪಿಎಸ್ಎಲ್ವಿ ಸಿ62 (PSLV C62) ರಾಕೆಟ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿAದ ಬೆಳಗ್ಗೆ 10:18ಕ್ಕೆ ಉಡಾವಣೆಗೊಂಡಿತ್ತು.
ಪಿಎಸ್ಎಲ್ವಿ-ಸಿ62 ರಾಕೆಟ್ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 16 ಉಪಗ್ರಹಗಳನ್ನು ಹೊತ್ತು ಹೊರಟಿತ್ತು. ರಾಕೆಟ್ ಆರಂಭ ಚೆನ್ನಾಗಿಯೇ ಆಗಿತ್ತು. ಆದರೆ ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿAದ ಈ ಮಿಷನ್ ಯಶಸ್ವಿಯಾಗಲಿಲ್ಲ ಎಂದು ಇಸ್ರೋ ತಿಳಿಸಿದೆ.
"ಇಂದು, ನಾವು PSLV C62 / EOS – N1 ಮಿಷನ್ ಅನ್ನು ಪ್ರಯತ್ನಿಸಿದ್ದೇವೆ. PSLV ರಾಕೆಟ್ ಎರಡು ಘನ ಮತ್ತು ಎರಡು ದ್ರವ ಹಂತಗಳನ್ನು ಹೊಂದಿರುವ ನಾಲ್ಕು ಹಂತದ ರಾಕೆಟ್ನ ಮೂರನೇ ಹಂತದ ಅಂತ್ಯದ ವೇಳೆಗೆ ವಾಹನದ ಕಾರ್ಯಕ್ಷಮತೆ ನಿರೀಕ್ಷೆಯಂತೆ ಇತ್ತು. ಆದರೆ ಮೂರನೇ ಹಂತದ ಅಂತ್ಯದ ವೇಳೆಗೆ ರಾಕೆಟ್ನಲ್ಲಿ ಸಮಸ್ಯೆ ಕಾಣಿಸಿ ತನ್ನ ಪಥದಲ್ಲಿ ಬದಲಾವಣೆ ಮಾಡಿತು. ನಾವು ಡೇಟಾವನ್ನು ವಿಶ್ಲೇಶಿಸಿ ಶೀಘ್ರವೇ ನಿಖರ ಕಾರಣವನ್ನು ಪತ್ತೆ ಮಾಡುತ್ತೇವೆ" ಎಂದು ಇಸ್ರೋ ಅಧ್ಯಕ್ಷ ವಿ ನಾರಾಯಣನ್ ತಿಳಿಸಿದ್ದಾರೆ.