ಮುಂಬಯಿ, ಜು 18 (Daijiworld News/SM): ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಪಟ್ಟದ ದೇವರಾದ ರಾಮ ವಿಠಲ ದೇವರಿಗೆ ಮಹಾಪೂಜೆಗೈದು ಮಠದಲ್ಲಿ ಪ್ರತಿಷ್ಠಾಪಿತ ಶ್ರೀ ಕೃಷ್ಣ ದೇವರಿಗೆ ಪೂಜೆ, ಮಹಾರತಿ ನೆರವೇರಿಸಿ ಪಾವಿತ್ರ್ಯತಾ ತಪ್ತ ಮುದ್ರಾಧಾರಣೆ ನಡೆಸಿ ಭಕ್ತರಿಗೆ ಮಂತ್ರಾಕ್ಷತೆ, ಪ್ರಸಾದ ವಿತರಿಸಿದರು.
ತಪ್ತವಾದ ಶರೀರದಿಂದ ಮಾಡಿದ ಸತ್ಕರ್ಮ ಸತ್ಫಲವನ್ನು ನೀಡುತ್ತಿದೆ. ಬಂಗಾರದ ಪಟ್ಟಿಹಾರ ಆಗಬೇಕಾದರೆ ಕಾಯಿಸಬೇಕು. ಹಾಗೆಯೇ ಶರೀರ ಶುದ್ಧಿಯಾದರೂ ಮತ್ತೆ ಮತ್ತೆ ಶುದ್ಧಿಯಾಗಬೇಕು ಎನ್ನುವ ವಿಚಾರ ಪ್ರಾಕೃತಿಕ. ಆದುದರಿಂದ ಮನುಕುಲವು ಕಷ್ಟ ಸಹಿಸುವ ಶಕ್ತಿ ಬೆಳೆಸಬೇಕು. ಆ ಸಂದರ್ಭ ಜೀವನದ ಉತ್ತುಂಗವನ್ನು ಮುಟ್ಟಬಹುದು ಎಂದು ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಇದರ ಕಾರ್ಯಾಧ್ಯಕ್ಷ ಡಾ| ಸುರೇಶ್ ಎಸ್ ರಾವ್, ಗೌರವ ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ವಿದ್ವಾನ್ ಎಸ್.ಎನ್ ಉಡುಪ, ಪಡುಬಿದ್ರಿ ವಿ.ರಾಜೇಶ್ ರಾವ್ ಉಪಸ್ಥಿತರಿದ್ದರು. ನೂರಾರು ಭಕ್ತರು ಮುದ್ರಾಧಾರಣೆ ಸ್ವೀಕರಿಸಿದರು.