ಮೈಸೂರು, ಜು 19 (Daijiworld News/RD): ರಾಜ್ಯದಲ್ಲಿ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಶುಕ್ರವಾರ ಮುಂಜಾನೆ ಮೈಸೂರು ಚಾಮುಂಡೇಶ್ವರಿ ದೇವಿಯ ಮೊರೆ ಹೋಗಿದ್ದಾರೆ.
ಸಾಂದರ್ಭಿಕ ಚಿತ್ರ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗ ಜನವಿರೋಧಿ, ಶಾಸಕ ವಿರೋಧಿ ಸರ್ಕಾರ ನಿರ್ಮಾಣವಾಗಿದೆ ಇದರಿಂದ ರಾಜ್ಯದ ಸ್ಥಿತಿ ತೀರಾ ಹದಗೆಟ್ಟಿದೆ, ಹಾಗಾಗಿ ಬಿಜೆಪಿ ಸರ್ಕಾರಕ್ಕೆ ಆಡಳಿತ ನೀಡಲಿ, ಇದಕ್ಕಾಗಿ ನಾನು ಈವರೆಗೆ ಚಾಮುಂಡಿ ತಾಯಿಗೆ ಈ ರೀತಿಯ ಬೇಡಿಕೆಯಿಟ್ಟಿಲ್ಲ, ಇದೇ ಮೊದಲು ಈ ರೀತಿಯಾಗಿ ದೇವರಿಗೆ ಮೊರೆ ಹೋದದ್ದು. ಶಾಸಕರು ಮೂರನೇ ತರಗತಿಯ ಮಕ್ಕಳಂತೆ ಆಡುತ್ತಿದ್ದು, ಸಾಮಾನ್ಯ ಪರಿಜ್ಞಾನ ಅವರಲ್ಲಿ ಇಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಳೆದ ವರ್ಷ ಕಾಂಗ್ರೆಸ್ ದುರಾಡಳಿತ ವ್ಯವಸ್ಥೆಯಿಂದ ರಾಜ್ಯದ ಪರಿಸ್ಥಿತ ಹದಗೆಟ್ಟಿದ್ದು ಈ ಬಾರಿ ಮೈತ್ರಿ ಸರ್ಕಾರದಿಂದ ಪ್ರತೀದಿನ ಆಡಳಿತ ವ್ಯವಸ್ಥೆ ಕುಸಿಯುತ್ತಾ ಬಂದಿದೆ. ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದು ಬರದಿಂದ ರೈತರ ಬದಕು ಸಂಕಷ್ಟದಿಂದ ಕೂಡಿದೆ. ಆದರೆ ಸರ್ಕಾರ ಈ ಎಲ್ಲ ಸಮಸ್ಯೆಗಳ ಬಗ್ಗೆ ಗಮನಹರಿಸದೇ ಇರುವುದು ವಿಷಾದನೀಯ. ಹಾಗಾಗಿ ಈಗ ಇರುವ ಸರ್ಕಾರವನ್ನು ತೊಲಗಿಸಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಮುಖ್ಯಮಂತ್ರಿ ಬಹುಮತ ಸಾಬೀತು ಪಡಿಸಲು ಹರ ಸಾಹಸ ಪಡುತ್ತಿದ್ದು ಈಗ ಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ. ಈ ರೀತಿ ದಿನಕ್ಕೊಂದು ನಾಟಕ ಮಾಡುವ ಸರ್ಕಾರ ಸದ್ಯದಲ್ಲಿ ಬೀಳುತ್ತದೆ. ಸರ್ಕಾರವು ಸುಪ್ರೀಂಕೋರ್ಟ್ ಹಾಗೂ ರಾಜ್ಯಪಾಲರನ್ನು ತೀರಾ ಕಡೆಗಣಿಸುತ್ತಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಹರಿಹಾಯ್ದಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಹಾಗೂ ಸರ್ಕಾರದ ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ ಶೋಭ, ಶಾಸಕರು ರಾಜೀನಾಮೆ ಕೊಟ್ಟಾಗ ಸ್ಪೀಕರ್ ಅದನ್ನು ಪರಿಗಣಿಸಬೇಕೇ ಹೊರತು ಅದನ್ನು ತಡ ಮಾಡುವ ಅವಶ್ಯಕತೆ ಇಲ್ಲ.
ಕಾಂಗ್ರೆಸ್ ಶಾಸಕ ಕಾಗೇವಾಡ ಶ್ರೀಮಂತ ಪಾಟೀಲ ಕಿಡ್ನಾಪ್ ಆರೋಪದ ಬಗ್ಗೆ ಮಾತನಾಡಿದ ಇವರು, ಅವರ ಮೇಲೆ ಯಾರೂ ಒತ್ತಡ ಹಾಕಲು ಸಾಧ್ಯವಿಲ್ಲ ಅವರೇನು ಚಿಕ್ಕ ಮಕ್ಕಳಲ್ಲ, ಶಾಸಕರೇ ಸ್ವತಃ ಸರ್ಕಾರದ ವಿರುದ್ಧ ಧ್ವನಿ ಎತ್ತಿ ಅಸಮಧಾನ ವ್ಯಕ್ತಪಡಿಸಿದ್ದಾರೆ.