ಬೆಂಗಳೂರು, ಜು 19(Daijiworld News/MSP): ಶುಕ್ರವಾರ ಮಧ್ಯಾಹ್ನ 1.30ರ ಒಳಗೆ ವಿಶ್ವಾಸಮತ ಸಾಬೀತುಪಡಿಸುವಂತೆ ರಾಜ್ಯಪಾಲರಾದ ವಜೂಭಾಯ್ ವಾಲಾ, ಸರಕಾರಕ್ಕೆ ಹಾಗೂ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಗಡುವು ವಿಧಿಸಿದ್ದರು. ಆದರೆ ರಾಜ್ಯಪಾಲರು ಕೊಟ್ಟ ಡೆಡ್ಲೈನ್ ಮುಕ್ತಾಯವಾದರೂ ವಿಶ್ವಾಸಮತವನ್ನು ಸಿಎಂ ಯಾಚಿಸುವ ಕ್ರಮಕ್ಕೆ ಮುಂದಾಗಲಿಲ್ಲ.
ಈ ನಡುವೆ ಕಲಾಪದಲ್ಲಿ ನಡೆದ ಬೆಳವಣಿಗೆಗಳನ್ನು ರಾಜ್ಯಪಾಲರ ಪ್ರತಿನಿಧಿಗಳು ಸದನಲ್ಲಿ ಹಾಜರಿದ್ದು ವೀಕ್ಷಿಸಿದ್ದಾರೆ. ಇವರು ಕಲಾಪದ ಬಗ್ಗೆ ವರದಿ ಸಲ್ಲಿಸಲಿದ್ದು, ಈ ವರದಿ ಮೇಲೆ ರಾಜ್ಯಪಾಲರು ಮುಂದಿನ ಕ್ರಮ ಕೈಗೊಳ್ಳಿದ್ದಾರೆ. ಹೀಗಾಗಿ ಸದ್ಯದ ರಾಜಕೀಯದ ಬೆಳವಣಿಗೆಗಳ ಚೆಂಡು ರಾಜ್ಯಪಾಲರ ಅಂಗಳಕ್ಕೆ ಮತ್ತೆ ಬಂದಿದೆ.
ವರದಿಯ ಆಧಾರದಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಸರಕಾರ ವಿಫಲ ಎಂದು ಪರಿಗಣಿಸುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಇದೇ ತೀರ್ಮಾನಕ್ಕೆ ರಾಜ್ಯಪಾಲರು ಬಂದರೆ ಸರಕಾರವನ್ನು ವಜಾ ಮಾಡುವಂತೆ ಆದೇಶ ನೀಡಬಹುದು.