ಬೆಂಗಳೂರು, ಜು 19 (Daijiworld News/SM): ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ನಾಟಕೀಯ ಬೆಳವಣಿಗೆ ನಡೆಯುತ್ತಿದ್ದು, ಇದರ ಕುರಿತಾದ ವರದಿಯನ್ನು ರಾಜ್ಯಪಾಲರು ತುರ್ತಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಿದ್ದಾರೆ.
ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರಿಗೆ ಶುಕ್ರವಾರ ಮಧ್ಯಾಹ್ನ 1.30ಕ್ಕೆ ವಿಶ್ವಾಸಮತ ಯಾಚನೆ ಮಾಡಲು ಗಡುವು ನೀಡಲಾಗಿತ್ತು. ಆದರೆ ಸಾಧ್ಯವಾಗಿಲ್ಲ.
ಈ ಬಗ್ಗೆ ಸದನದಲ್ಲಿ ಉತ್ತರಿಸಿದ ಸಿಎಂ ಕುಮಾರಸ್ವಾಮಿ, "1.30ಕ್ಕೆ ವಿಶ್ವಾಸಮತ ಯಾಚನೆ ಸಾಧ್ಯವಿಲ್ಲ, ಸಂವಿಧಾನ, ರಾಜ್ಯಪಾಲರ ಬಗ್ಗೆ ಗೌರವವಿದೆ, ಆದರೆ ಅವರ ಸಂದೇಶದ ಪ್ರಕಾರ ನಡೆದುಕೊಳ್ಳಲಾಗುತ್ತಿಲ್ಲ, ನನ್ನದೇ ಆದ ಚೌಕಟ್ಟಿದೆ" ಎಂದು ಹೇಳಿದ್ದರು.
ಮೊದಲು ನೀಡಿದ್ದ ಗಡುವು ತಿರಸ್ಕರಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರು, ಕಾನೂನು ತಜ್ಞರ ಜೊತೆ ಚರ್ಚಿಸಿ, ಸದನ ಕಲಾಪದ ಬಗ್ಗೆ ಮಾಹಿತಿ ಪಡೆದು, ಕೇಂದ್ರ ಗೃಹ ಇಲಾಖೆಗೆ ತುರ್ತು ವರದಿಯನ್ನು ಸಲ್ಲಿಸಿದ್ದಾರೆ, ಈ ವರದಿ ಆಧಾರದ ಮೇಲೆ ಕೇಂದ್ರ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಬಹುದಾಗಿದೆ.