ನವದೆಹಲಿ, ಜು 20(Daijiworld News/RD) : ಹೊಸ ಹೊಸ ವಿವಾದದ ಮೂಲಕ ಸುದ್ದಿಯಾಗುವ ಕಾಂಗ್ರೆಸ್ ಸಂಸದ ಶಶಿ ತರೂರ್ , ತಮ್ಮ ಟ್ವಿಟ್ಟರ್ ನಲ್ಲಿ ರಾಷ್ಟ್ರಧ್ವಜದ ತಲೆಕೆಳಗಾದ ಫೋಟೋ ಪೋಸ್ಟ್ ಮಾಡಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಾರೆ ಎಂದು ಟ್ವೀಟಿಗರ ಛೀಮಾರಿಗೆ ಗುರಿಯಾಗಿದ್ದಾರೆ.
ಶಶಿ ತರೂರ್, 30 ವರ್ಷ ಹಳೆಯ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಗುಜರಾತ್ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರ ಸಂಬಂಧಿಕರು . ಹಾಗಾಗಿ ಅವರು ನಿನ್ನೆ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಪತ್ನಿ ಶ್ವೇತಾ ಭಟ್ ಹಾಗೂ ಅವರ ಪುತ್ರ ಶಾಂತನೂ ಅವರನ್ನು ಭೇಟಿಯಾಗಿದ್ದರು. ಶಿಕ್ಷೆಗೆ ಗುರಿಯಾಗಿದ್ದ ಐಪಿಎಸ್ ಅಧಿಕಾರಿಗೆ ನ್ಯಾಯ ಸಿಗಲೇ ಬೇಕು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದಿದ್ದರು. ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪೋಟೋ ತೆಗೆಸಿಕೊಂಡ ತರೂರ್ ಫೋಟೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿದ್ದಾರೆ.
ಆದರೆ ಶಶಿ ತರೂರ್ ತಾನು ಪೋಸ್ಟ್ ಮಾಡಿದ ಚಿತ್ರದಲ್ಲಿ , ಅವರ ಕಚೇರಿಯ ಟೇಬಲ್ ಮೇಲೆ ಇರಿಸಿದ್ದ ರಾಷ್ಟ್ರಧ್ವಜ ತಲೆಕೆಳಗಾಗಿರುವುದು ಗೋಚರಿಸಿದೆ. ಹಸಿರು ಬಣ್ಣ ಮೇಲ್ಭಾಗದಲ್ಲಿ ಬರುವಂತೆ ರಾಷ್ಟ್ರ ಧ್ವಜ ಇರಿಸಲಾಗಿದೆ. ಎಂದು ನೆಟ್ಟಿಗರು ಈ ಟ್ವಿಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನು ತಮ್ಮಲ್ಲಿ ಮೊದಲು ರೂಡಿಸಿಕೊಳ್ಳಿ ಎಂದು ಸಾಮಾಜಿಕ ಜಾಲಾತಾಣದಲ್ಲಿ ತರೂರ್ ಮೇಲೆ ರೀ ಟ್ವೀಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.