ಕಾರವಾರ, ಜ. 23 (DaijiworldNews/TA): ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿಯಲ್ಲಿ ಪಿಕಳೆ ಕುಟುಂಬಕ್ಕೆ ಸೇರಿದ ವ್ಯಕ್ತಿ ರಾಜೀವ್ ಪಿಕಳೆ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜೀವ್ ಪಿಕಳೆ ಕುಟುಂಬವು ಎರಡು ತಲೆಮಾರಿನಿಂದ ಸಾಮಾಜಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ.

ಪರಿವಾರದವರು ತಿಳಿಸಿದಂತೆ, ರಾಜೀವ್ ಪಿಕಳೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಮತ್ತು ತೇಜೋವಧೆ ಅವರ ಆತ್ಮಹತ್ಯೆಗೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ, ರಾಜೀವ್ ಪಿಕಳೆ ಅವರು ಅವಧಿ ಮುಗಿದ ಔಷಧವನ್ನು ನೀಡಿದ ಬಗ್ಗೆ ಯೂಟ್ಯೂಬರ್ ವಿಡಿಯೋ ಮಾಡಿದ್ದು, ಇದು ವೈರಲ್ ಆಗಿ ಮಾನಸಿಕ ಒತ್ತಡಕ್ಕೆ ಕಾರಣವಾಯಿತು.
ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿ ತಮ್ಮ ಸಾವಿಗೆ ಕಾರಣವನ್ನು ಬರೆದಿರುವುದು ದೃಢವಾಯಿತು. ರಾಜೀವ್ ಪಿಕಳೆ ಕಾರವಾರದಲ್ಲಿ ಪ್ರಸಿದ್ಧ ಪಿಕಳೆ ಕುಟುಂಬದ ಪ್ರತಿಷ್ಠಿತ ಸದಸ್ಯರಾಗಿದ್ದು, ಇವರ ಕುಟುಂಬದ ಸೇವೆಯನ್ನು ಮೆಚ್ಚಿ ನಗರಸಭೆಯಲ್ಲಿ ರಸ್ತೆಗಳನ್ನು ಪಿಕಳೆ ರಸ್ತೆ ಎಂದು ನಾಮಕರಣ ಮಾಡಲಾಗಿದೆ.
ಪಿಕಳೆ ಕುಟುಂಬವು ಎರಡು ತಲೆಮಾರಿನಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ರಾಜೀವ್ ಅವರ ಮಕ್ಕಳೂ ವೈದ್ಯರಾಗಿದ್ದಾರೆ. ಆದರೆ, ರಾಜೀವ್ ಅವರು ಅಂಕೋಲಾದ ಹಟ್ಟಿಕೇರಿಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.