ಗದಗ, ಜ. 25 (DaijiworldNews/TA): ಲಕ್ಕುಂಡಿ ಗ್ರಾಮವು ತನ್ನ ನಿಗೂಢತೆಯ ಮೂಲಕ ಗಮನ ಸೆಳೆಯುತ್ತಿದೆ. ಊರಿನ ಪ್ರತಿ ಹೆಜ್ಜೆ ಹೆಜ್ಜೆಗೆ ಹೊಸ ಕುತೂಹಲಗಳು ಹುಟ್ಟುತ್ತಿವೆ. ಕೋಟೆ ದೇಗುಲದ ಮುಂದೆ ನಡೆದ ಉತ್ಖನನ ಸಂದರ್ಭದಲ್ಲಿ ನಾಗರಹಾವೊಂದು ಪತ್ತೆಯಾಗಿದ್ದು, ಲಕ್ಕುಂಡಿ ನಿನ್ನೆ ನಿನ್ನೆ ಸಂಚಲನಕ್ಕೆ ಕಾರಣವಾಯಿತು. ಊರಿನ ಜನರು ನಿಧಿ ಮತ್ತು ನಾಗಸರ್ಪಗಳ ನಡುವೆ ಸಂಬಂಧವಿರುವುದು ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಸಂಪ್ರದಾಯದಲ್ಲಿ ನಿಧಿ ಎಂದರೆ ಭೂಗರ್ಭದೊಳಗಿನ ಮಾಯಾ ಸಂಪತ್ತು, ಇದನ್ನು ಸಾಧಾರಣವಾಗಿ ಎಲ್ಲರೂ ಮುಟ್ಟಲು ಸಾಧ್ಯವಿಲ್ಲ. ನಾಗಸರ್ಪಗಳು ಈ ನಿಧಿಯ ರಕ್ಷಣೆಯ ಕಾರ್ಯದಲ್ಲಿ ಇದ್ದವು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇತ್ತೀಚೆಗೆ, ಲಕ್ಕುಂಡಿಯಲ್ಲಿ ಏಳು ಹೆಡೆಯ ಸರ್ಪದ ಶಿಲ್ಪಕಲೆ ಪತ್ತೆಯಾಗಿದ್ದು, ಇದು ನಾಡಿನ ನಿಧಿ ರಹಸ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಈ ಗ್ರಾಮವು ಐತಿಹಾಸಿಕವಾಗಿ ಸಂಪತ್ತಿನಿಂದ ತುಂಬಿದ ಸ್ಥಳವಾಗಿದೆ. ಹಲವು ರಾಜಮಹಾರಾಜರು ಈ ಪ್ರದೇಶವನ್ನು ಆಳಿದಾಗ, ಶಿಲ್ಪಕಲೆ ಮತ್ತು ಚಿನ್ನ, ಮುತ್ತು, ರತ್ನಗಳಿಂದ ಕೂಡಿದ ಭೂಮಿ ಇದ್ದು, ಅದು ತಲೆತಲಮಾರುಗಳಿಂದ ಜನರಿಗೆ ಕುತೂಹಲವನ್ನು ಮೂಡಿಸುತ್ತಿದೆ.
ಗ್ರಾಮಸ್ಥರು ಹೇಳುವಂತೆ, ಭೂಮಿಯೊಳಗಿನ ಬಂಡಾರದ ರಹಸ್ಯವನ್ನು ಬಿಚ್ಚಲು ಮೊದಲು ನಾಗಬಂಧವನ್ನು ಮುಕ್ತಗೊಳಿಸಬೇಕಾಗುತ್ತದೆ. ಏಳಡೆ ಸರ್ಪವು ಚಿನ್ನದ ರಾಶಿಯನ್ನು ಕಾಯುತ್ತಿದ್ದು, ಇದಕ್ಕೆ ಸಂಬಂಧಿಸಿದ ಅನೇಕ ವಿಸ್ಮಯಕಾರಿ ಘಟನೆಗಳು ನಡೆದಿವೆ. ಅನಾದಿಕಾಲದಿಂದಲೂ ಏಳಡೆ ಸರ್ಪದ ಬಗ್ಗೆ ಚರ್ಚೆ ಇದ್ದರೂ, ಮೂರ್ತಿ ಪತ್ತೆಯಾಗಿಲ್ಲದಿದ್ದ ಕಾರಣ ಇದನ್ನು ಕಪೋಕಲ್ಪಿತವೆಂದು ಮಾತ್ರ ಭಾವಿಸಲಾಯಿತು. ಇತಿಹಾಸ ತಜ್ಞ ಹನುಮಾಕ್ಷಿ ಗೋಗಿ ಹೇಳುವಂತೆ, ಲಕ್ಕುಂಡಿ 9ನೇ ಶತಮಾನದಿಂದ 17ನೇ ಶತಮಾನದವರೆಗೆ ಪ್ರಚಲಿತವಾದ ನಗರವಾಗಿತ್ತು. ವಾಣಿಜ್ಯ, ಧರ್ಮ ಮತ್ತು ದೇವಾಲಯಗಳ ಕೇಂದ್ರವಾಗಿದ್ದ ಈ ಊರು, ಸಮೃದ್ಧ ಸಂಪತ್ತಿನಿಗಾಗಿ ಹೆಸರಾದಿತ್ತು. ವಿಶೇಷವಾಗಿ, ಈ ಏಳು ಹೆಡೆಯ ನಾಗಮೂರ್ತಿಗೆ ಪ್ರತಿ ಅಮಾವಾಸ್ಯೆ ಪೂಜೆ ಮಾಡಲಾಗುತ್ತದೆ. ಪೂಜೆಯನ್ನು ಮಾಡಿದರೆ ಹಾವುಗಳು ಕಾಣಿಸಿಕೊಳ್ಳುತ್ತವೆ, ಮತ್ತು ಪೂಜೆ ಮರೆತರೆ ಅಪಾಯ ಸಂಭವಿಸಬಹುದೆಂದು ಗ್ರಾಮಸ್ಥರು ನಂಬುತ್ತಾರೆ.
ಲಕ್ಕುಂಡಿಯ ಬಾವಿಗಳೂ ವಿಶೇಷ ಕುತೂಹಲಕ್ಕೆ ಕಾರಣವಾಗಿವೆ. ಈ ಬಾವಿಗಳಲ್ಲಿ ಲಕ್ಷ್ಮಿದೇವಿ ಮೂರ್ತಿಗಳು, 101 ಬಾವಿಗಳು, 101 ದೇವಸ್ಥಾನಗಳು ಇವೆ. ಪ್ರತಿಯೊಂದು ಸ್ಥಳವೂ ನಿಗೂಢತೆಯನ್ನು ಹೊತ್ತಿದೆ. ಪಂಪ್ಹೌಸ್ ಎಂಬ ಹಳೆಯ ಕಟ್ಟಡದಲ್ಲೂ ಸಾವಿರಾರು ವರ್ಷಗಳ ಹಳೆಯ ಮೂರ್ತಿಗಳು ಉಳಿದಿವೆ. ದಿಕ್ಕಿಗೆ-ದಿಕ್ಕಿಗೆ ಮೂರ್ತಿಗಳು ಇರಲು, ಪಂಪ್ಹೌಸ್ನ ಕಟ್ಟಡವನ್ನು ಕೆಡವಬೇಕಾಗುತ್ತದೆ ಎಂದು ಸ್ಥಳೀಯ ಮಾಲೀಕರು ಹೇಳಿದ್ದಾರೆ. ಇನ್ನು ನಾಗರಹಸ್ಯವನ್ನು ಬಿಚ್ಚುವುದು ಹಾಗೂ ಉತ್ಖನನ ಕಾರ್ಯಗಳು ದಿನದಿಂದ ದಿನಕ್ಕೆ ಸಾಗುತ್ತಿವೆ. ನಿನ್ನೆ ನಡೆದ 9ನೇ ದಿನದ ಉತ್ಖನನದಿಂದ ಕೆಲವು ಪ್ರಾಚೀನ ವಸ್ತುಗಳು ಪತ್ತೆಯಾಗಿದ್ದು, ಬಂಗಾರದ ಸಂಪತ್ತಿನ ಕುರಿತ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಮಸ್ಥರು ಬಂಗಾರವು ಯಾವಾಗ ಸಿಗುತ್ತದೆಯೆಂದು ಕಣ್ಣರಳಿಸುತ್ತಿದ್ದಾರೆ.