ಮಡಿಕೇರಿ, ಜು21(Daijiworld News/RD): ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯ ಕಾರಣದಿಂದ ವಿವಿಧೆಡೆ ಗುಡ್ಡ ಕುಸಿತ ಸಂಭವಿಸಿದೆ. ಜೋಡುಪಾಲ ಬಳಿ ಶನಿವಾರ ಸಂಜೆ ಗುಡ್ಡವೊಂದು ಕುಸಿದ ಪರಿಣಾಮ ನಿರ್ಮಾಣ ಹಂತದ ಮನೆಯೊಂದು ಜಖಂಗೊಂಡಿದೆ.
ವೀರೇಂದ್ರ ಎಂಬವರ ಮನೆ ಇದಾಗಿದ್ದು, ಯಾವುದೇ ರೀತಿಯ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಈ ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಭೂವಿಜ್ಞಾನಿಗಳು ಅಧ್ಯಯನ ನಡೆಸಿದರು. ಜೋಡುಪಾಲ ಬಳಿಯ ಇನ್ನೂ ಕೆಲವು ಪ್ರದೇಶಗಳಲ್ಲಿ ಗುಡ್ಡ ಕುಸಿಯಬಹುದು ಅನ್ನುವ ಎಚ್ಚರಿಕೆಯನ್ನು ನೀಡಿದ್ದರು. ಇದೀಗ ಜೋಡುಪಾಲ ನಿವಾಸಿಗಳಿಗೆ ಆತಂಕ ಹೆಚ್ಚಿದೆ.
ಕಳೆದ ವರ್ಷ ಕೂಡ ಜೋಡುಪಾಲ ಸೇರಿ ಮಡಿಕೇರಿಯ ಕೆಲವು ಭಾಗಗಳಲ್ಲಿ ಗುಡ್ಡ ಕುಸಿದಿದ್ದು, ಈ ಬಾರಿಯೂ ಆತಂಕ ಎದುರಾಗಿದೆ.