ಶ್ರೀಹರಿಕೋಟ, ಜು 21(Daijiworld News/RD): ಕಳೆದ ಜು. 15 ರಂದು ಚಂದ್ರಯಾನ-2 ಯೋಜನೆಯ ರಾಕೆಟ್ ‘ಬಾಹುಬಲಿ’ ಉಡಾವಣೆಯ 56 ನಿಮಿಷಗಳ ಮುನ್ನ ತಾಂತ್ರಿಕ ದೋಷದ ಕಾರಣಗಳಿಂದ ರದ್ದುಗೊಂಡಿದ್ದು, ಇದೀಗ ಎಲ್ಲಾ ಅಡಚಣೆಗಳನ್ನು ನಿವಾರಿಸಿ ಮತ್ತೆ ಬಾಹ್ಯಾಕಾಶ ಪ್ರವೇಶಿಸಲು ಸಜ್ಜಾಗಿದೆ.
ಈ ಕುರಿತು ಇಸ್ರೋ ಸಂಸ್ಥೆಯ ಮಾಜಿ ಮುಖ್ಯಸ್ಥ ಕಿರಣ್ ಕುಮಾರ್ ಮಾತನಾಡಿ, ಈ ಹಿಂದೆ ಕಾಣಿಸಿಕೊಂಡಿದ್ದ ಎಲ್ಲ ತಾಂತ್ರಿಕ ದೋಷಗಳು ನಿವಾರಣೆಯಾಗಿದೆ ಅಲ್ಲದೇ ಪ್ರಾಯೋಗಿಕ ಪರೀಕ್ಷೆ ಕೂಡ ನಡೆಸಲಾಗಿದೆ. ಎಲ್ಲಾ ಪರೀಕ್ಷೆಗಳೂ ಯಶಸ್ವಿಯಾಗಿದ್ದು, ನಾಳೆ ಜುಲೈ 22 ರಂದು ಮಧ್ಯಾಹ್ನ 2.45 ಕ್ಕೆ ಉಡಾವಣೆ ಮಾಡಲು ಇಸ್ರೋ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಇಸ್ರೋ ಕೂಡ ಬಗ್ಗೆ ಟ್ವೀಟ್ ಮಾಡಿದ್ದು, ಚಂದ್ರಯಾನ-2 ನೌಕೆಯನ್ನು ಹೊತ್ತ ರಾಕೆಟ್ ‘ಬಾಹುಬಲಿ’ ಸಮರ್ಥವಾಗಿದ್ದು ನಾಳೆ ಉಡಾವಣೆಗೊಳ್ಳಲಿದೆ ಎಂದು ತಿಳಿಸಿದೆ. ಈಗಾಗಲೇ ಅದರ ಕಾರ್ಯಕ್ಷಮತೆಯನ್ನು ಪೂರ್ವ ತಯಾರಿಯಲ್ಲಿ ಗಮನಿಸಿದ್ದು ನಭಕ್ಕೆ ಈ ನೌಕೆ ನಾಳೆ ತೆರಳಲಿದೆ.
ಇದುವರೆಗೂ ಯಾರೂ ಅಧ್ಯಯನ ನಡೆಸಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ಗಗನ ನೌಕೆಯನ್ನು ಇಳಿಸಲು ಇಸ್ರೋ ಆಯ್ಕೆ ಮಾಡಿದೆ. ಮೊದಲ ಇಳಿಕೆಯ ಪ್ರಯತ್ನದಲ್ಲಿ
ಈ ನೌಕೆ ಸಫಲವಾದರೆ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ಬಾಹ್ಯಸಂಸ್ಥೆ ಎಂಬ ಹೆಗ್ಗಳಿಕೆಗೆ ಇಸ್ರೋ ಪಾತ್ರವಾಗಲಿದೆ.