ಶ್ರೀ ಹರಿಕೋಟಾ, ಜು 22 (Daijiworld News/MSP): ಇಡೀ ಜಗತ್ತಿನ ಗಮನಸೆಳೆದಿರುವ, ಕುತೂಹಲದಿಂದ ಎದುರು ನೋಡುತ್ತಿದ್ದ ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಅತ್ಯಂತ ಭಾರವಾದ ರಾಕೆಟ್ ಬಾಹುಬಲಿ ಎಂದು ಅಡ್ಡ ಹೆಸರಿನಿಂದ ಕರೆಯಲ್ಪಡುವ ಜಿಎಸ್ಎಲ್ ವಿ ಎಂಕೆ 3 ಚಂದ್ರಯಾನ-2 ಯಶಸ್ವಿಯಾಗಿ ಉಡಾವಣೆಗೊಂಡಿದೆ.
ಮಧ್ಯಾಹ್ನ 2.43 ಗಂಟೆಗೆ ಚಂದ್ರಯಾನ-2 ಉಡಾವಣೆಯಾಗಿದ್ದು ಬಾಹ್ಯಕಾಶದತ್ತ ಬಾಹುಬಲಿ ತನ್ನ ಪ್ರಯಾಣವನ್ನು ಆರಂಭಿಸಿದೆ. ಉಡಾವಣೆಗೊಂಡ 54 ದಿನಗಳ ಬಳಿಕ ಚಂದ್ರನ ನೆಲದಲ್ಲಿ ಇಳಿಯಲಿದೆ.
ಸುಮಾರು 930 ಕೋಟಿ ರೂಪಾಯಿ ವೆಚ್ಚದ ಚಂದ್ರಯಾನ 2 ಇಸ್ರೋದ ಮಹತ್ವದ ಯೋಜನೆಯಾಗಿದೆ. ಚಂದ್ರಯಾನ 2 ನಭಕ್ಕೆ ಚಿಮ್ಮಿದೆ. ಕಳೆದ 15ರಂದು ತಾಂತ್ರಿಕ ಅಡಚಣೆಯಿಂದ ಉಡಾವಣೆಗೆ 1 ಗಂಟೆ ಮೊದಲು ಚಂದ್ರಯಾನ-2 ರದ್ದಾಗಿತ್ತು.