ಬೆಂಗಳೂರು, ಜು 22 (Daijiworld News/RD): ವಿಶ್ವಾಸ ಮತಯಾಚನೆಯ ವಿಧಾನಸಭಾ ಕಲಾಪದಲ್ಲಿ ಚರ್ಚೆ ನಡೆಯುತ್ತಿದ್ದು, ಅತೃಪ್ತ ಶಾಸಕರು ರಾಜೀನಾಮೆ ಇತ್ಯರ್ಥವಾಗದೆ ಬಹುಮತಯಾಚನೆ ಇಲ್ಲ ಎಂದು ಸ್ಪೀಕರ್ಗೆ ಕೃಷ್ಣಭೈರೇಗೌಡ ಮನವಿಕೊಂಡಿದ್ದಾರೆ.
ಈಗಾಗಲೇ ಗೈರಾಗಿರುವ ಅತೃಪ್ತ ಶಾಸಕರು ರಾಜ್ಯದ ಮೈತ್ರಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಆರೋಪಿಸಿರುವ ಸಚಿವ ಕೃಷ್ಣಭೈರೇಡ ಕಳೆದ 10 ವರ್ಷಗಳಿಂದ ಬಿಜೆಪಿ ಎಲ್ಲೆಲ್ಲಿ ಹೇಗೆ ಆಪರೇಷನ್ ಕಮಲ ನಡೆಸಿತ್ತು ಎಂಬ ವಿವರಣೆ ನೀಡುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂಧರ್ಭದಲ್ಲಿ ತಮಿಳುನಾಡಿನಲ್ಲಿ 2017 ರಲ್ಲಿ ಉಂಟಾದ ರಾಜಕೀಯ ಸ್ಥಿತಿ ಹಾಗೂ 11 ಶಾಸಕರನ್ನು ಅನೂರ್ಜಿತಗೊಳಿಸಿದ ಸ್ಪೀಕರ್ ತೀರ್ಮಾನವನ್ನು ಉಲ್ಲೇಖಿಸಿ ಕೃಷ್ಣಭೈರೇಗೌಡ ಮಾತನಾಡಿದರು. ವಿಪ್ ಉಲ್ಲಂಘಿಸಿದ ಆಡಳಿತ ಪಕ್ಷದ ಶಾಸಕರನ್ನು ಅಲ್ಲಿನ ಸ್ಪೀಕರ್ ವಜಾಗೊಳಿಸಿದ್ದರು. ಸ್ಪೀಕರ್ ನಿರ್ಣಯವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಇಂದು ರಾಜ್ಯದಲ್ಲೂ ಸಹ ಇಂತಹದ್ದೇ ಇಂದು ಪರಿಸ್ಥಿತಿ ಎದುರಾಗಿದೆ ಎಂದರು.
ಈ ಮಾತಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ಆರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಇವತ್ತೇ ವಿಶ್ವಾಮತಯಾಚನೆ ಮುಗಿಸಿಬಿಡೋಣ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ಸಭಾ ನಾಯಕರು ಈಗಾಗಲೇ ಮಾತು ಕೊಟ್ಟಿದ್ದಾರೆ. ಇವತ್ತೇ ವಿಶ್ವಾಸ ಮತದ ಪ್ರಕ್ರಿಯೆ ಮುಗಿಸೋಣ ಎಂದು ತಿಳಿಸಿದರು.
ನನ್ನ ಮಾನ ಹರಾಜು ಮಾಡಲು ಕೆಲವು ಷಡ್ಯಂತ್ರ ನಡೆಸಿದ್ದಾರೆ. ಇಂದು ನನ್ನ ಬಗ್ಗೆ ಆಗಿದೆ. ನಾಳೆ ನಿಮ್ಮ ಬಗ್ಗೆಯೂ ಕೆಲವು ಅಪಪ್ರಚಾರ ಆಗಬಹುವುದು ಎಂದು ಹೇಳಿದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ಭಾವುಕರಾಗಿ ಕಣ್ಣೀರು ಹಾಕಿದರು.