ಬೆಂಗಳೂರು, ಜು 23 (DaijiworldNews/SM): ಮೈತ್ರಿ ಸರಕಾರ ಸದನದಲ್ಲಿ ಬಹುಮತ ಕಳೆದುಕೊಂಡ ಬೆನ್ನಲ್ಲೇ ರೆಬೆಲ್ ಶಾಸಕರು ಮಾಧ್ಯಮದ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಮಾಧ್ಯಮಕ್ಕೆ ರೆಬೆಲ್ ಶಾಸಕ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಸದ್ಯ ನಾವು ಪುಣೆಯಲ್ಲಿದ್ದು, ಬುಧವಾರದಂದು ನಾವು ಬೆಂಗಳೂರಿಗೆ ಆಗಮಿಸಲಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಎರಡು ವಾರಗಳಿಂದ ಕಾಯುತ್ತಿದ್ದ ಸಮಯ ಇಂದು ಬಂದೊದಗಿದೆ. ಸರಕಾರ ಪತನವಾಗಿದ್ದು, ತಮಗೆ ಸಮಧಾನ ತಂದಿದೆ. ನಾವೆಲ್ಲ ಅತೃಪ್ತ ಶಾಸಕರು ಜತೆಯಲ್ಲಿದ್ದೇವೆ. ನಾಳೆ ಬೆಂಗಳೂರಿಗೆ ಆಗಮಿಸಲಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಕಳೆದ 2 ವಾರಗಳಿಂದ ಮೈತ್ರಿ ಸರಕಾರದ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದ್ದ ರೆಬೆಲ್ ಶಾಸಕರು ಮುಂಬೈನ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರು. ಅವರನ್ನು ಮರಳಿ ಕರೆ ತರಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಅವುಗಳು ಯಾವುದೇ ಫಲ ನೀಡಿಲ್ಲ. ಆದರೆ, ಅತೃಪ್ತರ ನಿರೀಕ್ಷೆಯಂತೆ ಇದೀಗ ದೋಸ್ತಿ ಸರಕಾರ ಪತನಗೊಂಡಿದೆ.