ನವದೆಹಲಿ, ಜು 24 (Daijiworld News/RD): ಕರ್ನಾಟಕದಲ್ಲಿ ದುರಾಸೆಯ ಆಡಳಿತದ ದಾಹದಿಂದ ಬಿಜೆಪಿ ಗೆದ್ದಿದೆ. ಪ್ರಜಾಪ್ರಭುತ್ವದಲ್ಲಿನ ಪ್ರಾಮಾಣಿಕ ಹೋರಾಟಕ್ಕೆ ಸೋಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ವಿಶ್ವಾಸ ಮತ ಗಳಿಸಲು ಹರ ಸಾಹಸಪಟ್ಟ ಮೈತ್ರಿ ಸರ್ಕಾರ, ವಿಶ್ವಾಸಮತ ಸಾಬೀತು ಪಡಿಸುವಲ್ಲಿ ವಿಫಲವಾದರು. ಹೀಗಾಗಿ ಬಿಜೆಪಿ, ಸರ್ಕಾರ ರಚನೆ ಮಾಡಲು ಎಲ್ಲಾ ರೀತಿಯಾಗಿ ತಯಾರಾಗಿತ್ತು.
ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ "ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭವಾದ ದಿನದಿಂದಲೂ ಸರ್ಕಾರಕ್ಕೆ ಪಟ್ಟಭದ್ರ ಹಿತಾಸಕ್ತಿಗಳ ಬೆದರಿಕೆ ಇತ್ತು. ಅದರ ನಂತರವೂ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ತನ್ನ ಅಭಿವೃದ್ಧಿ ಪಥದಲ್ಲಿರುವ ಅಡಚಣೆಗಳನ್ನು ಬೆದರಿಕೆಗಳನ್ನು ಎದುರಿಸಿಕೊಂಡು ಸಾಗುತ್ತಿತ್ತು. ಆದರೆ ಕೊನೆಗೂ ಬಿಜೆಪಿಯ ದುರಾಸೆ ಗೆದ್ದಿದ್ದು, ಪ್ರಜಾಪ್ರಭುತ್ವ, ಪ್ರಾಮಾಣಿಕತೆ ಮತ್ತು ಕರ್ನಾಟಕದ ಜನತೆಗೆ ಸೋಲಾಗಿದೆ" ಎಂದು ಹೇಳಿಕೊಂಡಿದ್ದಾರೆ.
ಇನ್ನು ನಿನ್ನೆ ನಡೆದ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸರ್ಕಾರ ಉಳಿಸುವಲ್ಲಿ ವಿಫಲವಾಗಿದ್ದು, ಸಿಎಂ ರಾಜೀನಾಮೆ ಸಲ್ಲಿಕೆಯ ವೇಳೆಯಲ್ಲಿಯೂ ಅವರೊಡನೆ ಮೈತ್ರಿ ಸರ್ಕಾರದ ನಾಯಕರಾದ ಡಾ.ಜಿ.ಪರಮೇಶ್ವರ ಹಾಗೂ ಡಿ.ಕೆ.ಶಿವಕುಮಾರ್ ಸಾಥ್ ನೀಡುವ ಮೂಲಕ ಗಮನ ಸೆಳೆದರು.