ಕೋಲ್ಕತ್ತಾ, ಜು 24 (Daijiworld News/RD): ನವಜಾತ ಶಿಶುವಿಗೆ ನಾನೇ ತಂದೆ ಎಂದ ಮೂವರು , ಆಸ್ಪತ್ರೆಯಲ್ಲಿ ಗಲಾಟೆ ಮಾಡಿ ದೊಡ್ಡ ಸನ್ನಿವೇಶವನ್ನೆ ಸೃಷ್ಠಿಸಿದ ಘಟನೆ ದಕ್ಷಿಣ ಕೋಲ್ಕತ್ತಾದ ಐರಿಸ್ ಆಸ್ಪತ್ರೆಯಲ್ಲಿ ನಡೆದಿದೆ.
ಒಂದು ಮಗುವಿಗೆ ಮೂರು ಅಪ್ಪಂದಿರೇ! ಅನ್ನೋ ಸುದ್ದಿಯೇ ವಿಚಿತ್ರವಾಗಿದ್ದು, ನಾನೇ ಆ ಮಗುವಿನ ತಂದೆ ಎಂದು ಮೂರು ಜನರೂ ಮಗುವನ್ನು ನೋಡಲು ಪಟ್ಟು ಹಿಡಿದು ಆಸ್ಪತ್ರೆಯ ಸಿಬ್ಬಂದಿಯೇ ಬೆಚ್ಚಿ ಬೆರಗಾಗುವಂತೆ ಮಾಡಿದ್ದಾರೆ. ಹೆರಿಗೆಗಾಗಿ ಮಹಿಳೆಯೊಬ್ಬರನ್ನು ಅವರ ತಾಯಿ ಹಾಗೂ ಓರ್ವ ವ್ಯಕ್ತಿ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಅರ್ಜಿ ತುಂಬುವಾಗ ಮಹಿಳೆ ಜೊತೆ ಬಂದಿದ್ದ ವ್ಯಕ್ತಿ ಆಕೆಯ ಪತಿ ಹಾಗೂ ಹುಟ್ಟುವ ಮಗುವಿನ ತಂದೆ ಎಂದು ಬರೆದಿದ್ದರು. ತಪಾಸಣೆಗೆಂದು ವೈದ್ಯರು ಆಕೆಯನ್ನು ವಾರ್ಡಿನಿಂದ ಕರೆದುಕೊಂಡು ಹೋಗಿದ್ದರು. ಈ ವೇಳೆ ಇನ್ನೋರ್ವ ವ್ಯಕ್ತಿ ನಾನು ಆ ಮಹಿಳೆಯ ಪತಿ ಹಾಗೂ ಆಕೆಯ ಹೊಟ್ಟೆಯಲ್ಲಿರುವುದು ನನ್ನ ಮಗುವೆಂದು ಹೇಳಿ ಮಹಿಳೆಯನ್ನು ಭೇಟಿಯಾಗಲು ಬಂದಿದ್ದನು.
ಆಗ ಮೊದಲು ಪತಿಯೆಂದು ಬಂದ ವ್ಯಕ್ತಿಗೂ ಈತನಿಗೂ ಜಗಳ ನಡೆದ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅವರ ಜಗಳ ಬಿಡಿಸಿ ಮಗುವಿನ ನಿಜವಾದ ತಂದೆ ಯಾರೆಂದು ಪತ್ತೆ ಮಾಡುವುದಾಗಿ ತಿಳಿಸಿ, ಇಬ್ಬರನ್ನು ವಿಚಾರಣೆ ನಡೆಸಿದಾಗಲೂ ಕೂಡ ಆ ಇಬ್ಬರು ವ್ಯಕ್ತಿಗಳು ನಾನೇ ಮಗುವಿನ ತಂದೆ. ಆಕೆ ನನ್ನ ಪತ್ನಿ ಎಂದೇ ಹೇಳಿದ್ದಾರೆ.
ಇವರಿಬ್ಬರ ಈ ಉತ್ತರದಿಂದ ಪೊಲೀಸರಿಗೂ ಗೊಂದಲಗೊಂಡು, ಈ ವೇಳೆಯ ತಪಾಸಣೆಗೆ ತೆರಳಿದ ಮಹಿಳೆಯಲ್ಲಿಯೇ ಈ ಸಮಸ್ಯೆಯ ಬಗ್ಗೆ ವಿಚಾರಿಸುವ ಎಂದು ಅವರಿಬ್ಬರೂ ಕಾದು ಕುಳಿತ್ತಿದ್ದರು. ನಂತರ ಆ ಇಬ್ಬರಿಗೂ ಮದುವೆ ಪ್ರಮಾಣಪತ್ರ ನೀಡುವಂತೆ ಸೂಚಿಸಿದ್ದಾರೆ. ಎರಡನೇ ವ್ಯಕ್ತಿ ಮದುವೆ ಪ್ರಮಾಣಪತ್ರದೊಂದಿಗೆ ವಾಪಸ್ ಆಗಿದ್ದಾರೆ. ಬಳಿಕ ಮೊದಲನೆ ವ್ಯಕ್ತಿ ತಾನು ಮಹಿಳೆಗೆ ಸ್ನೇಹಿತ ಮಾತ್ರ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಮಹಿಳೆಯ ತಾಯಿ ಮ್ಯಾರೆಜ್ ಸರ್ಟಿಫಿಕೇಟ್ ತಂದ ವ್ಯಕ್ತಿ ತನ್ನ ಅಳಿಯನಲ್ಲ ಎಂದು ಹೇಳಿದಾಗ ಇವರ ಮಾತಿಗೆ ಪೊಲೀಸರು ಸುಸ್ತಾಗಿ ಹೋದರು.
ಪೊಲೀಸರು ಇನ್ನು ಈ ವ್ಯಕ್ತಿಗಳನ್ನು ವಿಚಾರಣೆ ನಡೆಸಿದರೆ ಪ್ರಯೋಜನವಿಲ್ಲ. ಮಹಿಳೆಯೇ ಹೇಳಿಕೆ ಪಡೆದು ಸಮಸ್ಯೆಗೆ ಬಗೆಹರಿಸಲು ಮುಂದಾದರು. ಆಗ ಮೂರನೇ ವ್ಯಕ್ತಿಯೊಬ್ಬ ಆಸ್ಪತ್ರೆಗೆ ಬಂದು, ನಾನು ಮಹಿಳೆಯ ಪತಿಯಲ್ಲ, ಆದ್ರೆ ಆಕೆಗೆ ಜನಿಸಿರುವುದು ನನ್ನ ಮಗು ಎಂದಾಗ ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸರ ತಲೆಹಿಂಡುವಂತೆ ಆಗಿದ್ದು, ಗಲಾಟೆ ನಡೆಸಿದ ಮೂವರು ವ್ಯಕ್ತಿಗಳು ಮಹಿಳೆಯನ್ನು ಭೇಟಿ ಮಾಡುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದರು.
ಈ ನಡುವೆ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತಾಳೆ. ಮಹಿಳೆಗೆ ಪ್ರಜ್ಞೆ ಬಂದ ಮೇಲೆ ಪೊಲೀಸರು ಈ ವಿಚಾರದ ಬಗ್ಗೆ ಆಕೆಯ ಬಳಿ ಹೇಳಿಕೆ ಪಡೆದಾಗ ಮ್ಯಾರೆಜ್ ಸರ್ಟಿಫಿಕೇಟ್ ಹೊಂದಿರುವ ವ್ಯಕ್ತಿ ನನ್ನ ಪತಿ. ನಾವಿಬ್ಬರು ಪ್ರೀತಿಸಿದ್ದೇವು. ಮದುವೆ ಕೂಡ ಆಗಿದ್ದೆವು. ಆದ್ರೆ ಮದುವೆಗೂ ಮುನ್ನವೇ ನಾನು ಸಂಬಂಧ ಬೆಳೆಸಿದ್ದ ಕಾರಣ ನಾನು ಗರ್ಭಿಣಿಯಾಗಿದ್ದೆ. ಆದರೆ ಮದುವೆ ನಂತರ ಪತಿ ಮನೆಯವರು ಸೊಸೆಯನ್ನಾಗಿ ನನ್ನನ್ನು ಒಪ್ಪಲಿಲ್ಲ ಎನ್ನುವ ಮೂಲಕ ನಿಜಾಂಶ ಬೆಳಕಿಗೆ ಬಂದಿದೆ.