ಅಹಮದಾಬಾದ್, ಜು 25 (Daijiworld News/RD): ವಿವಾಹವಾದ ಮೂರೇ ದಿನಗಳಲ್ಲಿ ಹೋಟೆಲ್ ಬುಕ್ ಮಾಡಿದ ಪತಿ, ಆತನ ಕ್ರೆಡಿಟ್ ಕಾರ್ಡ್ನ ಮೂಲಕ ಅಕ್ರಮ ಸಂಬಂಧ ರಿವೀಲ್ ಆದ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ ನಡೆದಿದೆ.
ವಿವಾಹವಾದ ಮೂರನೇ ದಿನಕ್ಕೆ ಕಚೇರಿಯ ಕೆಲಸದ ನಿಮಿತ್ತ ಹೊರ ಹೋಗುವುದಾಗಿ ಪತ್ನಿಯಲ್ಲಿ ಹೇಳಿದ್ದು, ಆದರೆ ಆತ ಆ ದಿನ ಕಚೇರಿಗೆ ತೆರಳದೇ ಹೋಟೆಲ್ನಲ್ಲಿ ಮಹಿಳೆಯೊಂದಿಗೆ ರೂಮ್ ಬುಕ್ ಮಾಡಿ ವಾಸ್ತವ್ಯ ಹೂಡಿದ್ದನು. ಹೀಗಾಗಿ ಒಂದು ದಿನ ಪತಿಯ ಕ್ರೆಡಿಟ್ ಕಾರ್ಡ್ ಬಿಲ್ ಚೆಕ್ ಮಾಡಿದ ಪತ್ನಿ ಹೋಟೆಲ್ನಲ್ಲಿ ಹಣ ಪಾವತಿಸಿದ ವಿಚಾರ ಅರಿವಿಗೆ ಬಂದಿತು.
ಈ ವಿಷಯವನ್ನು ಪತ್ನಿ ತನ್ನ ಅಣ್ಣನಿಗೆ ತಿಳಿಸಿದ್ದು, ಆತ ಪರಿಶೀಲನೆ ನಡೆಸಿದಾಗ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿರುವ ಅಂಶ ತಿಳಿದು ಬಂದಿದೆ.
ಪತಿಯ ಅಕ್ರಮ ಸಂಬಂಧ ವಿಚಾರ ಗೊತ್ತಾಗುತ್ತಿದ್ದಂತೆ, ಮಹಿಳೆಯು ತನ್ನ ಅತ್ತೆ-ಮಾವನಿಗೆ ತಿಳಿಸಿದ್ದಾಳೆ. ಆದ್ರೆ ಅತ್ತೆ-ಮಾವ ಮಗನನ್ನು ಪರವಾಗಿ ನಿಂತು ಮಾತನಾಡಿದ್ದಾರೆ. ಇದೇ ವಿಚಾರಕ್ಕೆ ಪತಿ ಹಾಗೂ ಕುಟುಂಬಸ್ಥರು ವಿಚ್ಛೇಧನ ನೀಡುವಂತೆ ದಿನಾಲೂ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.