ಮುಂಬೈ,ಫೆ. 06 (DaijiworldNews/AK): ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರ ಯಥಾಸ್ಥಿತಿಯಲ್ಲೇ ಮುಂದುವರಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಹಣಕಾಸು ವರ್ಷಕ್ಕೆ ಬಜೆಟ್ ಘೋಷಿಸಿದ ನಂತರದ ಮೊದಲ ಹಣಕಾಸು ನೀತಿ ಪರಿಶೀಲನೆ ಇದಾಗಿದೆ.

ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ನಡೆದ ಆರ್ಬಿಐನ ಹಣಕಾಸು ನೀತಿ ಸಮಿತಿಯು ಸಭೆಯು ಸರ್ವಾನುಮತದಿಂದ ಬಡ್ಡಿದರವನ್ನು ಯಥಾಸ್ಥಿತಿಯಲ್ಲೇ ಮುಂದುವರಿಸು ಬಗ್ಗೆ ನಿರ್ಧರಿಸಿದೆ. ಬೆಳವಣಿಗೆಯಾಗುತ್ತಿರುವ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಮತ್ತು ಒಟ್ಟಾರೆ ಆರ್ಥಿಕ ದೃಷ್ಟಿಕೋನದ ವಿವರವಾಗಿ ಮೌಲ್ಯಮಾಪನದ ನಂತರ ಎಂಪಿಸಿ ತಟಸ್ಥ ನಿಲುವನ್ನು ಕಾಯ್ದುಕೊಂಡಿದೆ ಎಂದು ಮಲ್ಹೋತ್ರಾ ಹೇಳಿದರು.
ದೇಶೀಯ ಹಣದುಬ್ಬರ ಮತ್ತು ಬೆಳವಣಿಗೆಯ ಮುನ್ನೋಟವು ಧನಾತ್ಮಕವಾಗಿದೆ. ಮುಂದಿನ ಎರಡು ತ್ರೈಮಾಸಿಕಗಳಿಗೆ ನೈಜ ಜಿಡಿಪಿ ಬೆಳವಣಿಗೆ ಏರಿಕೆಯಾಗುವಂತೆ ಪರಿಷ್ಕರಿಸಲಾಗಿದೆ ಎಂದು ಅವರು ಹೇಳಿದರು.
ಡಿಸೆಂಬರ್ನಲ್ಲಿ ನಡೆದ ಎಂಸಿಸಿ ಸಭೆಯಲ್ಲಿ ಆರ್ಬಿಐ 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದ್ದರಿಂದ ರೆಪೋ ಬಡ್ಡಿ ದರ 5.50% ರಿಂದ 5.25% ಕ್ಕೆ ಇಳಿಕೆಯಾಗಿತ್ತು.