ದಿಸ್ಪುರ್, ಫೆ. 08 (DaijiworldNews/AA): ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಅಧಿಕಾರಿಗಳಿಗೆ ತಿಳಿಸದೆ 2013 ರಲ್ಲಿ ಪಾಕಿಸ್ತಾನಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದರು. ಜೊತೆಗೆ ಅವರು ಅಲ್ಲಿ ಒಂದು ರೀತಿಯ ತರಬೇತಿ ಪಡೆದಿದ್ದಾರೆಂದು ಶಂಕಿಸಲಾಗಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ ಭಾನುವಾರ ಆರೋಪಿಸಿದ್ದಾರೆ.

ಇಂದು ಗುವಾಹಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ನಾಯಕನ ಬ್ರಿಟಿಷ್ ಪತ್ನಿ ಎಲೆಜಬೆತ್ ಅವರು ಈ ದೇಶದಲ್ಲಿ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಭಾರತದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ಕಳುಹಿಸಿದ್ದಾರೆ. ಅವರು ಎರಡು ಭಾರತೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾಗ ಒಂಬತ್ತು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದರು ಎಂದು ಆರೋಪ ಮಾಡಿದ್ದಾರೆ.
ಗೌರವ್ ಗೊಗೊಯ್, ಅವರ ಪತ್ನಿ ಮತ್ತು ಅಲಿ ತೌಕೀರ್ ಶೇಖ್ ನಡುವೆ ಆಳವಾದ ಸಂಬಂಧವಿದೆ. ಕೇಂದ್ರೀಯ ಸಂಸ್ಥೆಯ ತನಿಖೆಗೆ ನಾವು ಶಿಫಾರಸು ಮಾಡುತ್ತೇವೆ. ಪಾಕಿಸ್ತಾನದ ಕಂಪನಿಯೊಂದು ಎಲಿಜಬೆತ್ ಅವರಿಗೆ ಕೆಲಸ ನೀಡಿ, ನಂತರ ಭಾರತಕ್ಕೆ ವರ್ಗಾಯಿಸಿತು. ಆದರೆ ಅವರ ವೇತನವನ್ನು ಶೇಖ್ ಪಾವತಿಸುತ್ತಿದ್ದರು ಎಂದು ಹೇಳಿದರು.