ಹೊಸದಿಲ್ಲಿ, 26(Daijiworld News/RD): ಲೋಕಸಭೆ ಕಲಾಪದ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸಂಸದೆ ರಮಾ ದೇವಿಗೆ ಆಪ್ ಮುಜೆ ಬಹುತ್ ಪ್ಯಾರಿ ಲಗ್ತೀ ಹೆ ! ಎಂಬ ಆಕ್ಷೇಪಾರ್ಹ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ಅಜಾಮ್ ಖಾನ್, ಅವರ ಈ ಮಾತು ಇದೀಗ ಎಲ್ಲೆಡೆ ಆಕ್ರೋಶಕ್ಕೆ ಗುರಿಯಾಗಿದೆ.
ಲೋಕಸಭೆಯ ಕಲಾಪವು ಸಭಾಧ್ಯಕ್ಷ ಓಂ ಬಿರ್ಲಾ ಅವರ ಅನುಪಸ್ಥಿತಿಯಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸಂಸದೆಯ ರಮಾ ದೇವಿ ಕುರಿತು ಆಕ್ಷೇಪಾರ್ಹ ಹೇಳಿಕೆಯು ಕೆಲ ಕಾಲ ಸದನದಲ್ಲಿ ಗದ್ದಲ ಸೃಷ್ಟಿಯುಂಟು ಮಾಡಿತು.
ಲೋಕಸಭೆಯಲ್ಲಿ ನಿನ್ನೆ ತ್ರಿವಳಿ ತಲಾಖ್ ಮಸೂದೆ ಮೇಲಿನ ಚರ್ಚೆ ನಡೆಯುತ್ತಿರುವಾಗ ಸಭಾಪತಿ ಪೀಠದಲ್ಲಿದ್ದ ಬಿಜೆಪಿ ಸಂಸದೆ ರಮಾದೇವಿ ಅವರನ್ನು ಕುರಿತು ಅಜಾಮ್ ಖಾನ್, ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಎನ್ನುವ ಬಯಕೆ ಉಂಟಾಗುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಪಷ್ಟೀಕರಣ ನೀಡಿದ ಅಜಾಮ್ ಖಾನ್ ಅವರು, ನನ್ನ ಮಾತಿನ ಅರ್ಥ ತಪ್ಪಾಗಿ ಗ್ರಹಿಸಲಾಗಿದೆ. ನೀವು ನನ್ನ ಸಹೋದರಿಯಂತೆ ಎಂದು ಹೇಳಿದರು.
ಅಜಾಮ್ ಖಾನ್ ಈ ಹೇಳಿಕೆಗೆ ದೇಶದ ಮಹಿಳಾ ಸಂಘಟನೆಗಳು ತೀರಾ ಆಕ್ರೋಶಗೊಂಡಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಎಐಎಂಐಎಂ ಸಂಸದ ಅಕ್ಬರುದ್ದೀನ್ ಓವೈಸಿ ಸೇರಿದಂತೆ ಬಿಜೆಪಿ ನಾಯಕರು ಈ ಹೇಳಿಕೆಯನ್ನು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದ್ದಾರೆ.