ಪಶ್ಚಿಮ ಬಂಗಾಳ, ಜು 27 (Daijiworld News/RD): ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯ ಹೊಟ್ಟೆಯಲ್ಲಿ ಸುಮಾರು 1.68 ಕೆಜಿ ಬಂಗಾರ ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆಯ ಮೂಲಕ ಈ ಚಿನ್ನಾಭರಣಗಳನ್ನು ಹೊರತೆಗೆದ ವೈದ್ಯರು, ವೈದ್ಯಕೀಯ ವೃತ್ತಿಯಲ್ಲಿ ಈ ಘಟನೆ ಅಚ್ಚರಿ ಮೂಡಿಸಿದ್ದು, ಈ ಘಟನೆ ಬಿರ್ಭಮ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯ 22 ವರ್ಷದ ರುನಿ ಕತುನಾ ಆಗಿದ್ದು, ಕಳೆದ ಹಲವು ದಿನಗಳಿಂದ ತೀವ್ರ ಹೊಟ್ಟೆ ನೋವಿಗೆ ತುತ್ತಾಗಿದ್ದರು. ಇದಕ್ಕಾಗಿ ಆಸ್ಪತ್ರೆಯಲ್ಲಿ ದಾಖಾಲಾಗಿದ್ದು, ವೈದ್ಯರು ರುನಿಯ ದೇಹವನ್ನು ಸ್ಕ್ಯಾನ್ ಮಾಡಿ ನೋಡಿದಾಗ ವೈದ್ಯರು ಅಚ್ಚರಿ ಪಟ್ಟರು. ಹೀಗಾಗಿ ಶಸ್ತ್ರ ಚಿಕಿತ್ಸೆ ಮಾಡಿದ ಅವರು ಮಹಿಳೆಯ ಹೊಟ್ಟೆಯಲ್ಲಿ ಸುಮಾರು 1.68 ಕೆಜಿ ಚಿನ್ನಾಭರಣವನ್ನು ಹೊರತೆಗೆದರು.
ರುನಿ ಕತುನಾ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದ್ದು, ಶಸ್ತ್ರ ಚಿಕಿತ್ಸೆಯಲ್ಲಿ ಆಕೆಯ ಹೊಟ್ಟೆಯಲ್ಲಿ ಸರ, ಮೂಗುತಿ, ಕಿವಿಯೋಲೆ ಮತ್ತು ಬಳೆ ಸೇರಿದಂತೆ 1.5 ಕೆಜಿ ತೂಕದ ಬಂಗಾರ ಹಾಗೂ 5 ಹಾಗೂ 10 ರುಪಾಯಿ 60 ನಾಣ್ಯಗಳನ್ನು ವೈದ್ಯರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.