ನವದೆಹಲಿ,ಜು 27 (Daijiworld News/RD): ಮನೆಯೊಂದರಲ್ಲಿ ಕಳ್ಳತನ ಎಸಗುತ್ತಿದ್ದ 16 ವರ್ಷದ ಬಾಲಕನನ್ನು, ಹಿಗ್ಗಾಮುಗ್ಗಾ ಥಳಿಸಿ ಅತನನ್ನು ಕೊಂದ ಘಟನೆ ದೆಹಲಿಯ ಆದರ್ಶ ನಗರದಲ್ಲಿ ನಡೆಯಿತು.
ಆದರ್ಶ್ ನಗರದಲ್ಲಿದ್ದ ಮನೆಯೊಂದರಲ್ಲಿ ಕಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಈ ಬಾಲಕನನ್ನು ನೆರೆಹೊರೆಯ ನಿವಾಸಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದರ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿರುವ ಈ ಬಾಲಕ ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು, ಗುರುವಾರ ರಾತ್ರಿ ಬಾಲಕ ಕಳ್ಳತನ ಮಾಡಲು ಮನೆಯೊಳಗೆ ಪ್ರವೇಶಿಸಿದಾಗ ಈ ಘಟನೆ ನಡೆದಿದ್ದು, ಮಾಲೀಕರು ಮತ್ತು ಕೆಲವು ನೆರೆಹೊರೆಯವರು ಆತನನ್ನು ಥಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಈಗಾಗಲೇ ಆರು ಜನರನ್ನು ಪೊಲೀಸ್ ಬಂಧಿಸಿದ್ದಾರೆ.