ಡೆಹ್ರಾಡೂನ್ ಜು 27 (Daijiworld News/RD): ಹಸುಗಳು ಉಸಿರಾಡುವಾಗ ಆಮ್ಲಜಕವನ್ನು ಹೊರಹಾಕಲ್ಪಡುತ್ತದೆ ಇದರಿಂದಾಗಿ ಮನುಷ್ಯರಲ್ಲಿ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ, ಎಂದು ಕೆಲವು ದಿನಗಳ ಹಿಂದೆ ಹೇಳಿದ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಪೇಚಿಗೆ ಒಳಗಾಗಿದೆ.
ಗೋವಿನ ಹಾಲು ಮತ್ತು ಗೋಮೂತ್ರದಲ್ಲಿರುವ ವೈದ್ಯಕೀಯ ಅಂಶಗಳ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಕಾರ್ಯಕ್ರಮವೊಂದರಲ್ಲಿ, ಮಾತನಾಡಿದ ತ್ರಿವೇಂದ್ರ ಸಿಂಗ್, ಗೋವಿನ ಸನಿಹದಲ್ಲಿದ್ದರೆ ಕ್ಷಯರೋಗದಂತಹ ಅನೇಕ ಖಾಯಿಲೆಗಳನ್ನು ಕೂಡ ಗುಣಪಡಿಸಿಕೊಳ್ಳಬಹುದು. ಯಾಕೆಂದರೆ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಸೂಸುವ ಏಕೈಕ ಪ್ರಾಣಿ ಎಂದರೆ ಗೋವು ಮಾತ್ರ. ಹೀಗಾಗಿ ಗೋವು ಇರುವ ಸುತ್ತಲಿನ ಪ್ರದೇಶದಲ್ಲಿ ಹೆಚ್ಚಾಗಿ ಆಮ್ಲಜನಕ ತುಂಬಿಕೊಂಡಿರುತ್ತದೆ ಎಂದು ಹೇಳಿದ್ದಾರೆ.
ಜಾನುವಾರು ಮತ್ತು ಪಶುಸಂಗೋಪನಾ ತಜ್ಞರು ಮುಖ್ಯಮಂತ್ರಿಯ ಈ ಹೇಳಿಕೆಯು ತಪ್ಪಾದ ಹೇಳಿಕೆ ಎಂದಿದ್ದು, ಹಾಗೂ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಹಲವಾರು ಮಂದಿ ಮುಖ್ಯಮಂತ್ರಿಯ ಕಾಲೆಳೆದಿದ್ದಾರೆ.
ಈಗಾಗಲೇ ಮುಖ್ಯಮಂತ್ರಿಯ ಮಾತಿಗೆ ಕಚೇರಿ ಸ್ಪಷ್ಟನೆ ನೀಡಿದ್ದು, ಮುಖ್ಯಮಂತ್ರಿ ಕಚೇರಿಯು, ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳಲ್ಲಿ ಸಾಮಾನ್ಯ ಜನರ ನಂಬಿಕೆ ಏನಿದೆ ಅದನ್ನು ಸಿಎಂ ರಾವತ್ ಮತ್ತೊಮ್ಮೆ ಉಲ್ಲೇಖಿಸಿದ್ದಾರೆ, ಅಷ್ಟೇ”, ಎಂದು ಹೇಳಿಕೊಂಡಿದೆ.