ಮುಂಬಯಿ, ಜು 28 (Daijiworld News/RD): ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ನೀಡುವ ಪೊಲಿಸರೇ ಆರೋಪಿಯ ಜತೆ ಬಹಳ ಸಲುಗೆಯಿಂದ ನಡೆದುಕೊಂಡು, ಮಾತ್ರವಲ್ಲದೆ ಆರೋಪಿಯೊಬ್ಬನ ಜನ್ಮ ದಿನವನ್ನಾಚರಿಸಿದ ಘಟನೆ ಮುಂಬಯಿ ವಾಣಿಜ್ಯ ನಗರಿಯ ಠಾಣೆಯಲ್ಲಿ ನಡೆದಿದೆ. ಇದೀಗ ಜನ್ಮದಿನವನ್ನು ಆಚರಿಸಿದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಕೇಕ್ ಜತೆ ಠಾಣೆಗೆ ಆಗಮಿಸಿದ ಆರೋಪಿ ಅಯಾನ್ ಖಾನ್, ಪೊಲೀಸರ ಜತೆಗೆ ಕೇಕ್ ಕತ್ತರಿಸಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಈಗಾಗಲೇ ಈತ ಅಪಹರಣ ಮತ್ತು ಹೊಡೆದಾಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ.
ಅಯಾನ್ ಖಾನ್ ಕೇಕ್ ಕತ್ತರಿಸಿದ್ದು, ಬಳಿಕ ಪೊಲೀಸರಲ್ಲೊಬ್ಬರು ಆತನಿಗೆ ಕೇಕ್ ತಿನ್ನಿಸಿದ್ದು, ಈ ವಿಡಿಯೋ ಈಗಾಗಲೇ ವೈರಲ್ ಆಗುತ್ತಿದ್ದು, ಇದನ್ನು ಗಮನಿಸಿದ ಪೊಲೀಸರು ಅಯಾನ್ ಖಾನ್ ಮೇಲೆ ಈಗ ಯಾವುದೇ ಆರೋಪವಿಲ್ಲ, ಆತ ನಿರಪರಾಧಿ ಎಂದು ಹೇಳುವ ಮೂಲಕ ಈ ಘಟನೆಯ ಬಗ್ಗೆ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದೆ ಪೊಲೀಸ್ ಉಪ ಆಯುಕ್ತರು, ಪ್ರಸಂಗದ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ತನಿಖೆಗೆ ಆದೇಶಿಸಿದ್ದು, ಇನ್ನು ಮುಂದೆ ಪೊಲೀಸ್ ಠಾಣೆಯಲ್ಲಿ ಯಾರೊಬ್ಬನ ಜನ್ಮದಿನವನ್ನು ಆಚರಿಸಬಾರದು ಎಂಬ ಆದೇಶ ನೀಡಿದೆ.