ನವದೆಹಲಿ, ಜು 28 (Daijiworld News/RD): ಕಳೆದ ಕೆಲವು ದಿನಗಳ ಹಿಂದೆ ಜಿಎಸ್ಎಲ್ವಿ ಮಾರ್ಕ್ 3 ರಾಕೆಟ್ ಚಂದ್ರನ ಅಂಗಳಕ್ಕೆ ಚಿಮ್ಮಿದ್ದು, ಭಾರತೀಯ ವಿಜ್ಞಾನಿಗಳ ಈ ಸಾಧನೆಯ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಇಸ್ರೋದ ಈ ಸಾಧನೆ ಜಗ್ತತೇ ಹೆಮ್ಮೆಪಡುವಂತಹದ್ದಾಗಿದೆ. ಚಂದ್ರಯಾನ -3 ರ ಯಶಸ್ಸಿಗಾಗಿ ನಾನು ಇಸ್ರೋ ವಿಜ್ಞಾನಿಗಳನ್ನು ಭಾರತದ ದೇಶದ ಪ್ರಜೆಗಳ ಪರವಾಗಿ ಅಭಿನಂದಿಸಲು ಈ ಸಮಯದಲ್ಲಿ ಇಚ್ಚೆ ಪಡುತ್ತೇನೆ, ಭಾರತದ ಬಾಹ್ಯಾಕಾಶ ಸಾಧನೆಯ ಮತ್ತೊಂದು ಮೈಲಿಗಲಿಗೆ ಸಾಗಿಸುವ ಚಂದ್ರಯಾನ-3 ಕುರಿತು ಭಾರತೀಯರೆಲ್ಲರೂ ಅರಿತುಕೊಂಡಿರಬೇಕು. ಹೀಗಾಗಿ ಪ್ರತಿಯೊಬ್ಬ ಭಾರತೀಯನು ಇಸ್ರೋದ ಈ ಸಾಧನೆಯ ಕುರಿತು ಹರ್ಷ ವ್ಯಕ್ತಪಡಿಸಿದೆ. ಮತ್ತು ೨೦೧೯ನೇ ಇಸವಿ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಶುಭಫಲವನ್ನೇ ತಂದುಕೊಟ್ಟಿದೆ’ ಎಂದು ಅವರು ಹೇಳಿದರು.
ಪ್ರಾರಂಭದಲ್ಲಿ ಗಗನ ನೌಕೆಯ ಉಡಾವಣೆಗೆ ಅಡ್ಡಿ ಆಪತ್ತು ಬಂದರೂ ಸಹ ನಂತರ ಅದನ್ನು ಸರಿಪಡಿಸಿಕೊಂಡು ಕಳೆದ ಸೋಮವಾರದಂದು ಯಶಸ್ವಿಯಾಗಿ ಉಡವಾಣೆ ಮಾಡಲಾಯಿತು. ಇನ್ನು ಸೆಪ್ಟಂಬರ್ ತಿಂಗಳಿನಲ್ಲಿ ಈ ರಾಕೆಟ್ ಚಂದ್ರನ ಅಂಗಳವನನ್ನು ತಲುಪಲಿದೆ. ಹಾಗಾಗಿ ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ ಎಂದು ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಹೇಳಿಕೊಂಡರು.
ಇದುವರೆಗೆ ಯಾವ ದೇಶವು ಕೂಡ ಅಧ್ಯಯನ ನಡೆಸಿರದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಆಯ್ಕೆಮಾಡಿದ್ದು, ವಿಜ್ಞಾನಿಗಳ ಪ್ರಕಾರ ಸೆಪ್ಟೆಂಬರ್ನಲ್ಲಿ ಈ ನೌಕೆಯ ಮೊದಲ ಇಳಿಕೆಯಲ್ಲಿ ಯಶಸ್ವಿಯಾದರೆ, ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ಸಂಸ್ಥೆ ಭಾರತದ ಇಸ್ರೋ ಆಗಲಿದ್ದು, ಇಡೀ ಜಗತ್ತೇ ಹೆಮ್ಮೆ ಪಡುವಂತಹ ವಿಚಾರವಾಗಲಿದೆ.