ಬೆಂಗಳೂರು, ಜು 29 (Daijiworld News/RD): ಜನರ ಒಪ್ಪಿಗೆಯಿಲ್ಲದೆ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿ ಆಗಿರ್ತಾರೆ ಅನ್ನೋದು ಗ್ಯಾರಂಟಿ ಇಲ್ಲ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ನೂತನ ಸಿಎಂ ಅನ್ನು ಟೀಕಿಸಿದ್ದಾರೆ.
15ನೇ ವಿಧಾನಸಭೆಯಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿರಬೇಕು ಎಂಬುವುದು ನನ್ನಾಸೆ. ಆದ್ರೆ ನೀವೇ ಸಿಎಂ ಆಗಿರ್ತೀರಿ ಎಂಬುದರ ಬಗ್ಗೆ ನನಗೆ ಗ್ಯಾರಂಟಿ ಇಲ್ಲ. ತೃಪ್ತರು ಎಂದು ಹೇಳುವ ಅತೃಪ್ತರೊಂದಿಗೆ ಸರ್ಕಾರ ರಚನೆ ಮಾಡಿದ್ದಾರೆ. ಹಾಗಾಗಿ ಬಿಜೆಪಿಗೆ ಸ್ಥಿರ ಸರ್ಕಾರ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಮುಖುಮಂತ್ರಿ ಇಂದು ಬಹುಮತ ಸಾಬೀತು ಮಾಡಿದ್ದು ಸಾಂವಿಧಾನ ಬಾಹಿರ ಮತ್ತು ವಾಮ ಮಾರ್ಗ ಆಗಿದ್ದು, ನಾನು ಇದನ್ನು ವಿರೋಧಿಸುತ್ತೇನೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಹುಮತ ಸಾಬೀತು ಪಡಿಸುವ ನಿರ್ಣಯ ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಸಿದ್ದರಾಮಯ್ಯ, ಅಸ್ತಿತ್ವದಲ್ಲಿರುವ ಸರ್ಕಾರದ ಬಗ್ಗೆ ಮಾತನಾಡಿ ಜನಾದೇಶದ ಮೇಲೆ ಬಿಜೆಪಿ ಸರ್ಕಾರ ರಚನೆ ಮಾಡುತ್ತಿದೆ ಎಂದು ಈಗಾಗಲೇ ಹೇಳುತ್ತಿದೆ. ಮೈತ್ರಿ ಸರ್ಕಾರದ ಹಲವು ಶಾಸಕರನ್ನು ಅತೃಪ್ತರನ್ನಾಗಿ ಮಾಡಿದ್ದು, ಬಿಜೆಪಿ. ಯಡಿಯೂರಪ್ಪ ಮತ್ತು ನಾನು ಸಾರ್ವಜನಿಕ ಜೀವನಕ್ಕೆ ಒಂದೇ ಅವಧಿಯಲ್ಲಿ ಬಂದಿದ್ದೇವೆ. ಆದ್ರೆ ಒಂದು ಬಾರಿಯೂ ಜನಾದೇಶ ಸಿಗಲಿಲ್ಲ. ಈಗಾಗಲೇ ಬೇರೆ ಬೇರೆ ಬೇರೆ ಸನ್ನಿವೇಶದಲ್ಲಿ ನಾಲ್ಕು ಬಾರಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವುದು ನನಗೆ ಬೇಸರವಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.