ಬೆಂಗಳೂರು, ಜು 29 (Daijiworld News/MSP): ಕಳೆದ 14 ತಿಂಗಳ ಕಾಲ ನಾನು ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ. 2018 ರಲ್ಲಿ ಚುನಾವಣೆ ಫಲಿತಾಂಶದ ನಂತರ ನನಗೆ ಸ್ಪೀಕರ್ ಸ್ಥಾನ ನಿರ್ವಹಿಸುವಂತೆ ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಸಹಿತ ರಾಜ್ಯ ಸರ್ಕಾರದ ನಾಯಕರು ಸೂಚಿದ್ದರು. ಆದರೆ ಈಗ ಆ ಸರ್ಕಾರಕ್ಕೆ ಬಹುಮತ ಇಲ್ಲದ ಕಾರಣ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಮೇಶ್ ಕುಮಾರ್ ತಿಳಿಸಿದ್ದಾರೆ.
ಅಂದು ಆಡಳಿತ ಪಕ್ಷದ ಸರ್ವಾನುಮತದಿಂದ ಸ್ಪೀಕರ್ ಆಗಿ ನೇಮಕ ಮಾಡಿದ್ದರು. ಯಾರ ಒತ್ತಡಕ್ಕೂ ಮಣಿಯದೆ ನಾನು ಪ್ರಮಾಣಿಕವಾಗಿ ಕೆಲಸ ನಿರ್ವಹಿಸಿದ್ದೇನೆ. 14 ತಿಂಗಳಿನಿಂದ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಎಲ್ಲರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.
ಸದನದಲ್ಲಿ ನನ್ನದೊಂದು ಮನವಿ ಚುನಾವಣಾ ವ್ಯವಸ್ಥೆ ಸುಧಾರಣೆ ಅಗತ್ಯ, ಈ ಬಗ್ಗೆ ಕೇಂದ್ರವನ್ನು ಒತ್ತಾಯಿಸೋಣ ಎಂದರು. ಲೋಕಾಯುಕ್ತ ಕಾನೂನು ಹಾಗೂ 10 ನೇ ಶೆಡ್ಯೂಲ್ ಪುನರ್ ಪರಿಶೀಲನೆ ನಡೆಸಬೇಕಾದ ಅಗತ್ಯತೆ ಇದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.