ಬೆಂಗಳೂರು, ಜು 29 (Daijiworld News/RD): ನೂತನ ಮುಖ್ಯಮಂತ್ರಿಯಾಗಿ, ಸದನದಲ್ಲಿ ವಿಶ್ವಾಸ ಮತಯಾಚಿಸುವ ಮೂಲಕ ಬಿಜೆಪಿ ಭದ್ರ ಕೋಟೆಯನ್ನು ರಾಜ್ಯದಲ್ಲಿ ನಿರ್ಮಿಸಿದ್ದು, ಇದೀಗ ಉಪಮುಖ್ಯಮಂತ್ರಿಯ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಪ್ರಶ್ನೆ ಕಾಡಿದೆ.
ಬಹುಮತ ಸಾಬೀತು ಪಡಿಸಿದ ಬೆನ್ನಲ್ಲೇ ಸಚಿವ ಸಂಪುಟ ರಚನೆಯಲ್ಲಿ ಮುಂದಿನ ಡಿಸಿಎಂ ಯಾರು ಎಂಬ ಪ್ರಶ್ನೆ ಪ್ರಸ್ತುತ ಕಾಡತೊಡಗಿದೆ. ಈಗಾಗಲೇ ಯಡಿಯೂರಪ್ಪ ಸಚಿವ ಸ್ಥಾನಗಳನ್ನು ಜಾತಿವಾರು ಆಧಾರದ ಮೇಲೆ ನೀಡಲಾಗುವುದು ಎಂದು ತಿಳಿಸಿದ್ದು, ಹೀಗಾಗಿ ಡಿಸಿಎಂ ಸ್ಥಾನಕ್ಕೆ ಒಂದಷ್ಟು ಹಿರಿಯ ಹಾಗೂ ಸಂಭಾವ್ಯ ಶಾಸಕರ ಹೆಸರುಗಳು ಕೇಳಿಬಂದಿದೆ. ಈಗಾಗಲೇ ಡಿಸಿಎಂ ಹುದ್ದೆಯ ಮೇಲೆ ಈಶ್ವರಪ್ಪ, ಆರ್.ಅಶೋಕ್ ಮತ್ತು ಶ್ರೀರಾಮುಲು ಕಣ್ಣಿಟ್ಟಿದ್ದು, ಜಾತಿಯ ಲೆಕ್ಕಾಚಾರದಲ್ಲಿ ಈ ಸ್ಥಾನವನ್ನು ತುಂಬುತ್ತಾರಾ ಎಂಬ ವಿಚಾರ ಕಂಡುಬಂದಿದೆ.
ಈ ನಡುವೆ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ ಅರವಿಂದ ಲಿಂಬಾವಳಿ ಸಹ ಈ ಪಟ್ಟಿಯಲ್ಲಿ ಇರುವುದನ್ನು ಕಾಣಬಹುವುದು, ಆದರೆ ಬಿಜೆಪಿಯ ಹೈಕಮಾಂಡ್ ಹಾಗೂ ಯಡಿಯೂರಪ್ಪ ಎಷ್ಟು ಡಿಸಿಎಂ ಹುದ್ದೆಗಳನ್ನು ಸೃಷ್ಠಿಸಲಿದ್ದಾರೆ. ಯಾರ್ ಯಾರು ಡಿಸಿಎಂ ಹುದ್ದೆಯನ್ನು ಪಡೆಯುತ್ತಾರೆ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಡಿಸಿಎಂ ಆಯ್ಕೆಯ ಪ್ರಕ್ರಿಯೆಯಲ್ಲಿ ಆಂಧ್ರಪ್ರದೇಶದ ಸಿಎಂ ಜಗಮೋಹನ್ ರೆಡ್ಡಿಯಂತೆ ೫ಕ್ಕೂ ಹೆಚ್ಚು ಡಿಸಿಎಂ ಹುದ್ದೆಯನ್ನು ಸೃಷ್ಟಿಸಲಿದ್ದಾರಾ ಎಂಬುದನ್ನು ಮುಂದೆ ನೋಡಬೇಕಿದೆ.
ಪ್ರಸ್ತುತ ರಾಜಕೀಯ ಬೆಳವಣಿಗೆಯನ್ನು ಗಮನಿಸಿದಾಗ ಬಿಜೆಪಿಯಲ್ಲಿ ಮಂತ್ರಿ ಸ್ಥಾನಗಳಿಗಿಂತ ಹೆಚ್ಚು ಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಮೈತ್ರಿ ಸರ್ಕಾರವನ್ನು ಪತನ ಮಾಡಿದ ಬಿಜೆಪಿ ಇದೀಗ ಪಕ್ಷದೊಳಗಿನ ಸಚಿವ ಸ್ಥಾನವನ್ನು ಆಕಾಂಕ್ಷಿಗಳ ಕನಸನ್ನು ಹುಸಿಗೊಳಿಸುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿ ಕಾಡಿದೆ. ಸಚಿವ ಸ್ಥಾನದ ಆಂಕಾಕ್ಷಿಗಳಿಗೆ ಮಂತ್ರಿ ಸ್ಥಾನ ನೀಡುವುದು ಸರ್ಕಾರವನ್ನು ಬೀಳಿಸಿದಷ್ಟು ಸುಲಭವಲ್ಲ. ಹಾಗಾಗಿ ಸಂಪುಟ ರಚನೆಯ ಸಂದರ್ಭದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಎಷ್ಟು ಶಾಸಕರಿಗೆ ಮಂತ್ರಿ ಸ್ಥಾನವನ್ನು ನೀಡುತ್ತಾರೆ ಎಂಬ ಕುತೂಹಲ ಕಂಡುಬಂದಿದೆ.