ಬೆಂಗಳೂರು, ಫೆ. 12 (DaijiworldNews/TA): ಕೆಲ ದಿನಗಳ ಹಿಂದೆ ಮಾತ್ರ ಪ್ಯಾನ್ ಇಂಡಿಯಾ ನಟಿ ತಮನ್ನಾ ಭಾಟಿಯಾ ಮೈಸೂರು ಸ್ಯಾಂಡಲ್ ಉತ್ಪನ್ನಗಳಿಗೆ ರಾಯಭಾರಿ ಆಗಿದ್ದು ಕೆಲವರ ಆಕ್ಷೇಪಕ್ಕೆ ಕಾರಣವಾಗಿತ್ತು. ಇದೀಗ ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ತಮ್ಮ ನಂದಿನಿ ಉತ್ಪನ್ನಗಳಿಗೆ ಹಿರಿಯ ನಟಿ ಸುಧಾರಾಣಿ ಅವರನ್ನು ರಾಯಭಾರಿ ಮಾಡಿದೆ. ಆದರೆ ಇದಕ್ಕೆ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳ) ವಿರೋಧ ವ್ಯಕ್ತಪಡಿಸಿದೆ.

ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಅವರು ಸುಧಾರಾಣಿ ಅವರನ್ನು ಭೇಟಿಯಾಗಿ ಹೂಗುಚ್ಛ ನೀಡಿ ಸ್ವಾಗತಿಸಿದಿದ್ದಾರೆ. ಸುಧಾರಾಣಿ ಸಂತಸ ವ್ಯಕ್ತಪಡಿಸಿ, “‘ನಂದಿನಿ ರೈತರ ನಂಬಿಕೆಯ ಸಂಕೇತ. ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದು ಗೌರವದ ಜವಾಬ್ದಾರಿ’ ಎಂದು ಹೇಳಿದ್ದಾರೆ. ದೇಸಿ ಹಸುಗಳಿಂದ ತಯಾರಿಸಿದ A2 ತುಪ್ಪ, A2 ಹಾಲು ಸೇರಿದಂತೆ ಹೊಸ ಉತ್ಪನ್ನಗಳ ಪ್ರಚಾರದಲ್ಲಿ ಭಾಗಿಯಾಗುವುದು ಹೆಮ್ಮೆ” ಎಂದು ಅವರು ಹೇಳಿದರು.
ಆದರೆ, ಈ ನೇಮಕಕ್ಕೆ ಮಾತೃಸಂಸ್ಥೆಯಾದ ಕೆಎಂಎಫ್ ಆಕ್ಷೇಪ ವ್ಯಕ್ತಪಡಿಸಿದೆ. ಬಮೂಲ್ ಅವರು ಕೆಎಂಎಫ್ಗೆ ಮಾಹಿತಿ ನೀಡದೆ ಸುಧಾರಾಣಿ ಅವರನ್ನು ರಾಯಭಾರಿ ಮಾಡಿರುವುದು ನಿಯಮವಿರೋಧಿ ಎಂದು ಅವರು ಹೇಳಿದ್ದಾರೆ. ಬಳಿಕ ಬಮೂಲ್ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಲಾಗಲಿದೆ ಎಂದು ವರದಿ ಮಾಡಲಾಗಿದೆ.
ಇದಕ್ಕೆ ಮುನ್ನ, ಡಾ. ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ನಂದಿನಿ ರಾಯಭಾರಿಗಳಾಗಿದ್ದರು. ಆದರೆ ಅವರ ನೇಮಕದ ಹಿಂದೆ ಕೆಎಂಎಫ್ ನ ನಿಗ್ರಹವಿತ್ತು. ಈಗ ಬಮೂಲ್ ಸ್ವತಂತ್ರವಾಗಿ ಸುಧಾರಾಣಿ ಅವರನ್ನು ನೇಮಕ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.