ಬೆಂಗಳೂರು, ಜು 29 (Daijiworld News/RD): ಅತೃಪ್ತಗೊಂಡ ಶಾಸಕರನ್ನು ಈಗಾಗಲೇ ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಈಗಾಗಲೇ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು, ಇದೀಗ ಡೆಪ್ಯೂಟಿ ಸ್ಪೀಕರ್ ಆಗಿ ಕೃಷ್ಣಾರೆಡ್ಡಿ ನೇಮಕಗೊಂಡಿದ್ದಾರೆ. ಇದೀಗ ಇಂದು ನಡೆಯುತ್ತಿರುವ ವಿಧಾನಸಭಾ ಕಲಾಪವನ್ನು ಬುಧವಾರಕ್ಕೆ ಮುಂದೂಡಿದ್ದಾರೆ.
ಡೆಪ್ಯೂಟಿ ಸ್ಪೀಕರ್ ಆಗಿ ಕೃಷ್ಣಾರೆಡ್ಡಿ ಆಯ್ಕೆಗೊಂಡಿದ್ದು ಇದೀಗ ಬುಧವಾರ 11 ಗಂಟೆಗೆ ವಿಧಾನಸಭಾ ಕಲಾಪ ನಡೆಯಲಿದೆ ಎಂದು ತಿಳಿಸಿದ್ದಾರೆ. ನೂತನ ಸಭಾಧ್ಯಕ್ಷರ ನೇಮಕಗೊಳಿಸಸುವ ಸಲುವಾಗಿ ನಾಳೆ ಮಧ್ಯಾಹ್ನ 12ಗಂಟೆಯವರೆಗೆ ಅವಕಾಶವಿದ್ದು, ನಿಗದಿತ ಸಮಯದೊಳಗೆ ನಾಮಪತ್ರ ಸಲ್ಲಿಸಬೇಕು ಎಂದಿದ್ದಾರೆ.