ಮುಂಬೈ, ಫೆ. 13 (DaijiworldNews/AK): ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆಯನ್ನು ಆರ್ಪಿಎಫ್ ಸಿಬ್ಬಂದಿ ಬಂದು ರಕ್ಷಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಕುರ್ಲಾ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಚಲಿಸುತ್ತಿರುವ ರೈಲಿನಿಂದ ಬಿದ್ದಿದ್ದಾರೆ. ಟಿಸಿ ಈ ಘಟನೆಯನ್ನು ಗಮನಿಸಿ ಕೂಡಲೇ ಸಹಾಯಕ್ಕಾಗಿ ಧಾವಿಸಿದ್ದಾರೆ. ಈ ಇಡೀ ಘಟನೆ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.