ಹೈದರಾಬಾದ್, ಜು 29(DaijiworldNews/SM): ಕಾಂಗ್ರೆಸ್ ಹಿರಿಯ ಸಂಸದ, ನಾಯಕ ಜೈಪಾಲ್ ರೆಡ್ಡಿ ಅವರು ವಿಧಿವಶರಾಗಿದ್ದು, ಅಂತಿಮಯಾತ್ರೆಯಲ್ಲಿ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪಾಲ್ಗೊಂಡರು. ಮಧ್ಯಾಹ್ನ ಸದನದಿಂದ ತೆರಳಿದ ಮಾಜಿ ಸಿಎಂ ಹಾಗೂ ಮಾಜಿ ಸ್ಪೀಕರ್ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದರು.
ಇನ್ನು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ನಾಯಕರು ಅಂತಿಮ ಯಾತ್ರೆಯ ಸಂದರ್ಭದಲ್ಲಿ ತಮ್ಮ ಗುರುಗಳ ಪಾರ್ಥೀವ ಶರೀರಕ್ಕೆ ಹೆಗಲು ನೀಡಿದರು. ಇಬ್ಬರೂ ನಾಯಕರು ಕೆಲ ಕಾಲ ಜೈಪಾಲ್ ರೆಡ್ಡಿ ಅವರ ಮೃತ ದೇಹವನ್ನು ಹೊತ್ತು ಅವರಿಗೆ ವಿದಾಯ ಹೇಳಿದರು.
ಜೈಪಾಲ್ ರೆಡ್ಡಿ ಅವರ ಅಂತಿಮ ಕಾರ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ಹಿರಿಯ ನಾಯಕರು, ಪಕ್ಷಾತೀತರಾಗಿ ಅಂತಿಮಕಾರ್ಯದಲ್ಲಿ ಭಾಗವಹಿಸಿದ್ದರು.
ಕೇಂದ್ರದ ಮಂತ್ರಿಗಳಾಗಿಯೂ ಅನುಭವ ಹೊಂದಿದ್ದ ಜೈಪಾಲ್ ರೆಡ್ಡಿಯವರಿಗೆ ಪಕ್ಷಾತೀತವಾಗಿ ಗೆಳೆಯರಿದ್ದರು. ಜೈಪಾಲ್ ರೆಡ್ಡಿ ಅವರು ಕಾಂಗ್ರೆಸ್ ಹಿರಿಯ ಸದಸ್ಯರಾಗಿದ್ದರು. ಇನ್ನು ಅಗಲಿದ ನಾಯಕ ಜೈಪಾಲ್ ರೆಡ್ಡಿಯವರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರವಿವಾರದಂದೆ ಸಂತಾಪ ಸೂಚಿಸಿದ್ದರು. ಅಂತಿಮ ಕಾರ್ಯದಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಇಂದು ಸದನವನ್ನು ತರಾತುರಿಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಮುಗಿಸಿದ್ದರು.