ಬೆಂಗಳೂರು, ಫೆ. 16 (DaijiworldNews/AA): ಮಗಳ ಆಧಾರ್ ಬಳಸಿ ತಾಯಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮಗಳ ಆಧಾರ್ ಕಾರ್ಡ್ ಬಳಸಿ ತಾಯಿ ಬಸ್ನಲ್ಲಿ ಪ್ರಯಾಣಿಸಿದ್ದು, ಕಂಡಕ್ಟರ್ ಪ್ರಶ್ನೆ ಮಾಡಿದ್ದಕ್ಕೆ ಮಹಿಳೆ, ನಾನು ವಯಸ್ಸಾದವಳು, ಯಾರೂ ನನ್ನ ಕೇಳಿಲ್ಲ, ನೀನ್ಯಾರು ಕೇಳೋಕೆ? ಎಂದು ಕಿರಿಕ್ ಮಾಡಿದ್ದಾರೆ.
ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದಲೂ ಮಗಳ ಆಧಾರ್ ಕಾರ್ಡ್ ಬಳಸಿ ಪ್ರಯಾಣಿಸಿದ್ದೇನೆ. ಎಲ್ಲಿವರೆಗೂ ಫ್ರೀ ಕೊಡ್ತಾರೋ ಅಲ್ಲಿವರೆಗೂ ಓಡಾಡುತ್ತೇನೆ ಎಂದು ಆಕೆ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.