ಬೆಂಗಳೂರು, ಫೆ. 17 (DaijiworldNews/AA): ಬಜೆಟ್ ಸಮಯದಲ್ಲಿ ಕಾಂಗ್ರೆಸ್ ಬಣ ಬಡಿದಾಟ ಹೆಚ್ಚಾಗಲಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಫಾರಿನ್ ಟ್ರಿಪ್ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡಿದ ಅವರು, "ಕಾಂಗ್ರೆಸ್ ಸರ್ಕಾರದಲ್ಲಿ ಸೊನ್ನೆ ಅಭಿವೃದ್ಧಿ, ಈಗ ಕಿತ್ತಾಟ ಶುರುವಾಗಿದೆ. ಅದು ಎಲ್ಲಿಗೆ ಹೋಗಿ ನಿಲ್ಲುತ್ತೋ ಹೇಳೋಕೆ ಸಾಧ್ಯವಿಲ್ಲ. ಹೈಕಮಾಂಡ್ ಹೇಳಿದಂತೆ ಕೇಳ್ತೀವಿ ಅಂತಾರೆ. ಹೈಕಮಾಂಡನ್ನ ಧಿಕ್ಕರಿಸೋ ಕೆಲಸ ನಡೆದಿದೆ. ಸಿಎಂ-ಡಿಸಿಎಂ ಕುರ್ಚಿ ಹೋರಾಟದಲ್ಲಿ ಸಂಪೂರ್ಣವಾಗಿ ಕರ್ನಾಟಕ ರಾಜ್ಯ ಹದಗೆಟ್ಟು ಹೋಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಕಾನೂನು ಸುವ್ಯವಸ್ಥೆ, ಅಭಿವೃದ್ಧಿ ಕೆಳಮಟ್ಟಕ್ಕೆ ಕುಸಿದಿದೆ. ಬಣ ಬಡಿದಾಟದಲ್ಲಿ ಇವರು ರಾಜ್ಯ ಹಾಳು ಮಾಡ್ತಾ ಇದ್ದಾರೆ. ಕರ್ನಾಟಕ ರಾಜ್ಯ ಸಂಪತ್ಭರಿತ ರಾಜ್ಯ ಇವರ ಅಧಿಕಾರದಲ್ಲಿ ಅತ್ಯಂತ ಕೀಳು ಮಟ್ಟಕ್ಕೆ ಹೋಗ್ತಿದೆ. ಬಜೆಟ್ ಆದ ಮೇಲೆ ಇವರ ಬಣ ಬಡಿದಾಟ ಇನ್ನು ಜಾಸ್ತಿ ಆಗುತ್ತದೆ. ಬಜೆಟ್ ಸಮಯದಲ್ಲೇ ಇವರ ಬಣ ಬಡಿದಾಟ ಜಾಸ್ತಿ ಆಗಬಹುದು ಅನ್ನಿಸುತ್ತೆ" ಎಂದರು.