ಬೆಂಗಳೂರು, ಜೂ 30 (Daijiworld News/RD): ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅಧಿಕಾರ ಹಿಡಿದಿದ್ದು, ಇದೀಗ ವಿಪಕ್ಷಗಳಲ್ಲಿ ನಾಯಕರ ಹುದ್ದೆಗಾಗಿ ಪೈಪೋಟಿ ನಡೆಯುತ್ತಿದೆ. ಉಭಯ ಸದನಗಳ ಪ್ರತಿಪಕ್ಷದ ನಾಯಕರನ್ನು ಆಯ್ಕೆ ಮಾಡಲು ಕಾಂಗ್ರೆಸ್ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಪಕ್ಷದ ನಾಯಕನಿಗಾಗಿ ಜಿದ್ದಾಜಿದ್ದಿ ನಡೆಯುತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಹುದ್ದೆಯಲ್ಲಿ ಮುಂದುವರಿಯುವುದು ಬೇಡ ಎಂಬ ಅಭಿಪ್ರಾಯವನ್ನು ಹೊಂದಿರುವ ಪಕ್ಷದ ಶಾಸಕರು, ಪಕ್ಷದ ಈ ಎಲ್ಲಾ ಲಾಬಿಗೆ ವಿಪಕ್ಷ ನಾಯಕನನ್ನು ಕಾಂಗ್ರೆಸ್ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ನೇಮಕ ಮಾಡುವ ಮೂಲಕ ತೆರೆ ಎಳೆಯಲ್ಲಿದ್ದಾರೆ. ಆಜಾದ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಜೊತೆ ಪ್ರಮುಖರ ಸಭೆ ಶುಕ್ರವಾರ ನಡೆಯಲಿದ್ದು, ಬಳಿಕ ಪ್ರತಿಪಕ್ಷದ ನಾಯಕರು ಯಾರೆನ್ನುವುದರ ಬಗ್ಗೆ ಬಹಿರಂಗಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಿಎಲ್ಪಿ ಮತ್ತು ಪ್ರತಿಪಕ್ಷ ಸ್ಥಾನಕ್ಕೆ ಪ್ರತ್ಯೇಕ ನಾಯಕರನ್ನು ಆಯ್ಕೆ ಮಾಡಬೇಕು ಎನ್ನುವುದು ಕಾಂಗ್ರೆಸ್ನ ವಾದವಾಗಿದ್ದು. ಈ ಪೈಕಿ ಒಂದು ಸ್ಥಾನವನ್ನು ಸಿದ್ದರಾಮಯ್ಯ ವಹಿಸಿಕೊಳ್ಳಲಿದ್ದು, ಮತ್ತೊಂದು ಸ್ಥಾನಕ್ಕೆ ಎಚ್.ಕೆ.ಪಾಟೀಲ್, ಜಿ.ಪರಮೇಶ್ವರ ಮತ್ತಿತರರ ನಾಯಕರ ಹೆಸರನ್ನು ಉಲ್ಲೇಖಿಸಿದೆ. ಪಕ್ಷದಲ್ಲಿ ಈಗ ಒಳಗೊಳಗೆ ಕಾದಾಟ ಶುರುವಾಗಿದೆ.