ನವದೆಹಲಿ,,ಫೆ. 19 (DaijiworldNews/ AK): ಭಾರತ ದೆಹಲಿಯಲ್ಲಿ ಆಯೋಜಿಸಿರುವ AI ಇಂಪ್ಯಾಕ್ಟ್ ಶೃಂಗಸಭೆ ಕುತೂಹಲಕಾರಿ ಅಂಶವೆಂದರೆ AI ಶೃಂಗಸಭೆಯಲ್ಲಿ ಅತ್ಯಂತ ಕಿರಿಯ ಮುಖ್ಯ ಭಾಷಣಕಾರನಾಗಿ 8 ವರ್ಷದ ಬಾಲಕ ರಣವೀರ್ ಸಚ್ದೇವ ಭಾವಹಿಸಿದ್ದಾನೆ.

ಆತನನ್ನು ಬಾಲ ಪ್ರತಿಭೆ ಎಂದು ಪ್ರಶಂಸಿಸಲಾಗುತ್ತಿದೆ. ಈ ವರ್ಷದ AI ಶೃಂಗಸಭೆಯಲ್ಲಿ ರಣವೀರ್ ಅತ್ಯಂತ ಕಿರಿಯ ಮುಖ್ಯ ಭಾಷಣಕಾರನಾಗಿದ್ದು, ಭಾರತೀಯ AI ಮಾದರಿಯ ಬಗ್ಗೆ ಮಾತನಾಡಿರುವುದು ವಿಶೇಷ. ಈ ಬಗ್ಗೆ ಮಾಹಿತಿ ನೀಡಿರುವ ರಣವೀರ್ ಸಚದೇವ್, “ಭಾರತದ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ನಾನು ಅತ್ಯಂತ ಕಿರಿಯ ಮುಖ್ಯ ಭಾಷಣಕಾರನಾಗಿ ಭಾಗವಹಿಸಲು ಬಂದಿದ್ದೇನೆ.
ಪ್ರಾಚೀನ ಭಾರತೀಯ ತತ್ವಶಾಸ್ತ್ರಗಳನ್ನು ಆಧುನಿಕ ತಂತ್ರಜ್ಞಾನಗಳ ಜೊತೆ ಹೇಗೆ ಲಿಂಕ್ ಮಾಡಬಹುದು ಎಂಬುದರ ಕುರಿತು ನಾನು ಮಾತನಾಡಿದ್ದೇನೆ. ಉಳಿದ ರಾಷ್ಟ್ರಗಳು AI ಅನ್ನು ಹೇಗೆ ನಿರ್ಮಿಸುತ್ತಿವೆ ಎಂಬುದರ ಕುರಿತು ಕೂಡ ನಾನು ಮಾತನಾಡಿದ್ದೇನೆ. ನಾನು ಇದೀಗ ಬಿಡುಗಡೆಯಾದ ಭಾರತೀಯ AI ಮಾದರಿಯ ನನ್ನ ಸ್ವಂತ ಬಳಕೆಯ ಕೇಸನ್ನು ಕೂಡ ಹಂಚಿಕೊಂಡಿದ್ದೇನೆ. ನಾನು ಭಾರತದ GDPಗೆ ಹೇಗೆ ಕೊಡುಗೆ ನೀಡುತ್ತಿದ್ದೇನೆ ಮತ್ತು ಅದರೊಂದಿಗೆ AI ಸಾಕ್ಷರತೆಯನ್ನು ಹೇಗೆ ಹೆಚ್ಚಿಸುತ್ತಿದ್ದೇನೆ ಎಂಬುದರ ಮಾಹಿತಿಯನ್ನು ಹಂಚಿಕೊಂಡಿದ್ದೇನೆ” ಎಂದು ವಿವರಿಸಿದ್ದಾನೆ.
ಅಂದಹಾಗೆ, ರಣವೀರ್ ಜಾಗತಿಕ ವೇದಿಕೆಯಲ್ಲಿ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. 2025ರಲ್ಲಿ ಸ್ವಿಜರ್ಲೆಂಡ್ನ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ AI ಫಾರ್ ಗುಡ್ ಗ್ಲೋಬಲ್ ಶೃಂಗಸಭೆಯಲ್ಲಿ ಆತನನ್ನು ಅತ್ಯಂತ ಕಿರಿಯ ಮುಖ್ಯ ಭಾಷಣಕಾರರಾಗಿ ಆಹ್ವಾನಿಸಲಾಗಿತ್ತು. ಆಗ ಆತನಿಗೆ ಕೇವಲ 7 ವರ್ಷವಾಗಿತ್ತು.
ಇಷ್ಟು ಚಿಕ್ಕ ವಯಸ್ಸಿನಲ್ಲಿಯೂ ಸಹ, ರಣವೀರ್ ಸಚ್ದೇವ್ 180ಕ್ಕೂ ಹೆಚ್ಚು ದೇಶಗಳು, 53 ವಿಶ್ವಸಂಸ್ಥೆಯ ಪಾಲುದಾರ ಸಂಸ್ಥೆಗಳು ಮತ್ತು ಜಾಗತಿಕ AI ನಾಯಕರನ್ನು ವಿಶ್ವಾಸದಿಂದ ಉದ್ದೇಶಿಸಿ ಮಾತನಾಡಿದ್ದು ವಿಶೇಷವಾಗಿತ್ತು.