ಹೈದರಾಬಾದ್, ಫೆ. 20 (DaijiworldNews/AA): ಮೇ ತಿಂಗಳಲ್ಲಿ ಹೊಸ ಪಕ್ಷ ಉದ್ಘಾಟನೆ ನಡೆಯಲಿದೆ. ಪಕ್ಷದ ಹೆಸರಿನಲ್ಲಿ 'ತೆಲಂಗಾಣ' ಕೂಡ ಇರುತ್ತದೆ ಎಂದು ಭಾರತ್ ರಾಷ್ಟ್ರ ಸಮಿತಿ ಪಕ್ಷದಿಂದ ಉಚ್ಛಾಟಿಸಲಾಗಿದ್ದ ಕೆ.ಕವಿತಾ ಅವರು ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾಗಿರುವ ಅವರು, "ತೆಲಂಗಾಣ ನಮ್ಮ 'ಮಾತೃ ಮಂಡಳಿ'. ಸಾಮಾಜಿಕ ತೆಲಂಗಾಣ (ತೆಲಂಗಾಣ ಮತ್ತು ಸಾಮಾಜಿಕ ನ್ಯಾಯ) ನಮ್ಮ ಗುರಿ. ಜನರ ಆಕಾಂಕ್ಷೆಗಳಿಗೆ ಅನುಗುಣವಾಗಿ ನಾವು ಪಕ್ಷವನ್ನು ನಡೆಸುತ್ತೇವೆ" ಎಂದು ಹೇಳಿದರು.
"ಮುಂದಿನ ವಿಧಾನಸಭಾ ಚುನಾವಣೆಯಲ್ಲಿ, ಸಿದ್ದಿಪೇಟೆ ಕ್ಷೇತ್ರದಿಂದ ಸ್ಪರ್ಧಿಸುವುದು ಮತ್ತು ಎರಡನೇ ಆಯ್ಕೆಯಾದ ಬೋಧನ್ನಿಂದ ಸ್ಪರ್ಧಿಸುತ್ತೇನೆ. ತಮ್ಮ ಪಕ್ಷವು ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಲಿದೆ. ನಾವು ಪಕ್ಷವನ್ನು ಸ್ಥಾಪಿಸಿದ ನಂತರ, ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವದಲ್ಲಿರುವುದಿಲ್ಲ" ಎಂದರು.
"ಆಡಳಿತಾರೂಢ ಕಾಂಗ್ರೆಸ್ ಜೊತೆಗೆ ಬಿಆರ್ಎಸ್ ಮತ್ತು ಬಿಜೆಪಿ ಜನವಿರೋಧಿ ನೀತಿಗಳು ಮತ್ತು ದುಷ್ಕೃತ್ಯಗಳ ಬಗ್ಗೆ ನಾವು ನಿರಂತರವಾಗಿ ಪ್ರಶ್ನಿಸುತ್ತೇವೆ ಮತ್ತು ಆಪಕ್ಷಗಳನ್ನು ಮೂಲೆಗುಂಪು ಮಾಡುತ್ತೇವೆ" ಎಂದು ತಿಳಿಸಿದರು.