ಬೆಂಗಳೂರು,ಜೂ 30 (Daijiworld News/RD): ಈಗಾಗಲೇ ನಾಪತ್ತೆಯಾಗಿರುವ ಎಸ್.ಎಂ.ಕೃಷ್ಣ ಅವರ ಅಳಿಯ, ಕಾಫೀ ಡೇ ಮಾಲಿಕ ವಿ.ಜಿ.ಸಿದ್ದಾರ್ಥ್ ಅವರು ಸುಮಾರು 8 ಸಾವಿರ ಕೋಟಿಗೂ ಅಧಿಕ ಸಾಲ ಪಡೆದಿದ್ದಾರೆ ಎಂದು ಆಡಳಿತ ಮಂಡಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ವಿ.ಜಿ.ಸಿದ್ದಾರ್ಥ್ ಸುಮಾರು24 ಬ್ಯಾಂಕ್ ಗಳಿಂದ 8 ಸಾವಿರ ಕೋಟಿಗೂ ಅಧಿಕ ಸಾಲ ಪಡೆದಿದ್ದಾರೆ ಎಂದು ಕಾಫೀ ಡೇ ಆಡಳಿತ ಮಂಡಳಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದು, ಆಕ್ಸಿಸ್ ಬ್ಯಾಂಕ್ 315 ಕೋಟಿ ರೂ ಸಾಲ, ಯೆಸ್ ಬ್ಯಾಂಕ್ 273 ಕೋಟಿ , ಐಡಿಬಿಐ ಬ್ಯಾಂಕ್ ನಲ್ಲಿ4475 ಕೋಟಿ ರೂ, ಆದಿತ್ಯ ಬಿರ್ಲಾದಲ್ಲಿ278 ಕೋಟಿ ರೂ, ಪಿರಾಮಿಲ್ ನಲ್ಲಿ 175 ಕೋಟಿ ರೂ, ಆಸಿಸ್ ಫೈನಾನ್ಸ್ ಮತ್ತು ಕೋಟಕ್ ಮಹೀಂದ್ರಾದಲ್ಲಿ 125 ಕೋಟಿ ರೂ, ಆರ್ ಬಿಎಲ್ ನಲ್ಲಿ174 ಕೋಟಿ ರೂ, ಎಕೆ ಕ್ಯಾಪಿಟಲ್ 121ಕೋಟಿ ರೂ, ಎಸ್ ಟಿಸಿಐನಲ್ಲಿ 100 ಕೋಟಿ, ಆಕ್ಸಿಸ್ ಟ್ರಸ್ಟಿಯಲ್ಲಿ 915 ಕೋಟಿ ರೂ, ಇಸಿಎಲ್ ಫೈನಾನ್ಸ್ 150 ಕೋಟಿ ರೂ, ಕ್ಲಿಕ್ಸ್ ಕ್ಯಾಪಿಟಲ್ 175 ಕೋಟಿ ರೂ, ಬಜಾಜ್ ಫೈನಾನ್ಸ್ 45 ಕೋಟಿ ರೂ ಸಾಲದ ಪಡೆದುಕೊಂಡಿದ್ದೇನೆ ಎಂದಿದ್ದಾರೆ.
ಸಾಲದ ಹೊರೆಯಿಂದಾಗಿ ಆತ್ಮಹತ್ಯೆ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದ್ದು, ಇದೀಗ ಸುತ್ತಮುತ್ತ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.