ಕಾರವಾರ, ಫೆ. 22 (DaijiworldNews/TA): ಡಿಸಿಎಂ ಡಿ. ಕೆ ಶಿವಕುಮಾರ್ ಕಾರವಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಶಾಸಕರು ಇಕ್ಬಾಲ್ ಹುಸೇನ್, ಗಣಿಗ ರವಿ ಮತ್ತು ಶಿವಗಂಗಾನೂ “ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರೆ ನನಗೆ ಒಳ್ಳೆಯದಾಗುತ್ತದೆ” ಎಂದು ಬೆಂಬಲಿಗರಿಗೆ ಡಿಕೆಶಿ ವಾರ್ನಿಂಗ್ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅವರು ಸಿಎಂ ಬಣದ 15ಕ್ಕೂ ಹೆಚ್ಚು ಶಾಸಕರು ವಿದೇಶಿ ಪ್ರವಾಸಕ್ಕೆ ಹೋದ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. “ವಿದೇಶ ಪ್ರವಾಸಕ್ಕೆ ಹೋದವರೆಲ್ಲ ನಮ್ಮವರೇ. ಅವರು ಬಂದ ಮೇಲೆ ಯಾತಕ್ಕಾಗಿ ಹೋಗಿದ್ದೀರಾ ಅಂತ ಕೇಳ್ತೀನಿ” ಎಂದು ಅವರು ಹೇಳಿದರು.
ಅದೇ ವೇಳೆ, ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದ ವಿಚಾರದ ಬಗ್ಗೆ ಮಧ್ಯಪ್ರವೇಶ ಮಾಡುವುದಿಲ್ಲವೆಂದು ಡಿಸಿಎಂ ಹೇಳಿದರು. “ಲೋಕಾಯುಕ್ತ ಸ್ವತಂತ್ರ ಸಂಸ್ಥೆ. ನಾವ್ಯಾರು ಈ ಬಗ್ಗೆ ವಿಚಾರ ಮಾಡಲು ಹೋಗಿಲ್ಲ. ಪಕ್ಷದ ಬಜೆಪಿಯವರು ಈ ಬಗ್ಗೆ ಮಾತನಾಡಬೇಕು” ಎಂದು ಅವರು ಟಾಂಗ್ ನೀಡಿದ್ದಾರೆ.