ಮಂಡ್ಯ, ಜೂ 30 (Daijiworld News/RD): ಕ್ರೈಸ್ತ ಧರ್ಮದ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಪಾಠ ಬೋಧಿಸಿದ ಬಳಿಕ, ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿದ್ದ ದೇವರ ಪೋಟೋವನ್ನು ತೆಗೆದು ಎಸೆದ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.
ಎಲಿಜಬೆತ್ ಮರ್ಸಿ ಹೆಸರಿನ ಕ್ರೈಸ್ತ ಧರ್ಮದ ಶಿಕ್ಷಕಿಯಾಗಿದ್ದು, ಮಕ್ಕಳಿಗೆ ಪಾಠ ಪುಸ್ತಕದ ವಿಷಯನ್ನು ಕಲಿಸುವ ಬದಲು ಕ್ರಿಶ್ಚಿಯನ್ ಧರ್ಮ ಹಾಗೂ ಏಸುಕ್ರಿಸ್ತನ ಬಗ್ಗೆ ಬೋಧನೆ ಮಾಡಿ ಮಕ್ಕಳಲ್ಲಿ ಮತಾಂಧತೆಯ ಬೀಜವನ್ನು ಬಿತ್ತುವಂತೆ ಮಾಡಿದ್ದು, ಜೊತೆಗೆ ಹಿಂದೂ ಧರ್ಮದ ಬಗ್ಗೆ ಮಕ್ಕಳಲ್ಲಿ ಕೀಳಿರಿಮೆಯ ಭಾವನೆ ಹುಟ್ಟುವಂತೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಶಾಲೆಯ ಅವಧಿಯ ಬಳಿಕ ಮನೆಗೆ ಬಂದ ಬಾಲಕಿ, ಶಿಕ್ಷಕರ ಪಾಠದಿಂದ ಪ್ರೇರಿತಗೊಳಯುವ ಮೂಲಕ, ಮನೆಯಲ್ಲಿ ಹಿಂದೂ ಧರ್ಮದ ಎಲ್ಲಾ ದೇವರ ಪೋಟೊಗಳನ್ನು, ಅರಿಶಿಣ- ಕುಂಕುಮ ಎಸೆದು, ಏಸ್ತುಕ್ರಿಸ್ತನ ಶಿಲುಬೆಯ ಡಾಲರ್ನ್ನು ಹಾಕಿಕೊಂಡಿದ್ದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.
ಈ ಘಟನೆಯ ಬಗ್ಗೆ ತಿಳಿದುಕೊಂಡ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ಆ ಶಾಲೆಗೆ ಧಾವಿಸಿ ಶಾಲೆಯ ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡು, ಯಾವುದೇ ಕಾರಣಕ್ಕೂ ಮಕ್ಕಳನ್ನು ಮತಾಂತರ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಇಂತಹ ಶಿಕ್ಷಕಿಯ ಬಗ್ಗೆ ಇಲ್ಲಿನ ಆಡಳಿತ ಮಂಡಳಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಶಿಕ್ಷಕಿ ಈ ಘಟನೆಯ ಬಗ್ಗೆ ಎಚ್ಚೆತ್ತುಕೊಂಡು ಎಚ್ಚರದಿಂದ ತನ್ನ ವೃತ್ತಿಯನ್ನು ನಿಭಾಯಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಾಕ್ಷಿ ಆಧಾರದ ಮೇಲೆ ಶಾಲೆಯ ಮುಖ್ಯ ದ್ವಾರದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.