ಚೆನ್ನೈ, ಫೆ. 23 (DaijiworldNews/AA): ಡಿಎಂಕೆ ಅಧ್ಯಕ್ಷರ ನಿಜವಾದ ಸ್ನೇಹಿತರು ಭ್ರಷ್ಟರಾಗಿದ್ದು, ರಾಜಕೀಯ ಲಾಭದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಅವರ ವಿರುದ್ಧ ಟಿವಿಕೆ ಸಂಸ್ಥಾಪಕ ಮತ್ತು ನಟ-ರಾಜಕಾರಣಿ ವಿಜಯ್ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯ್, "ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸ್ಟಾಲಿನ್ ತಾವು ಹೊಂದಿದ್ದ ಆಸ್ತಿಗಳನ್ನು ಮತ್ತು ಈಗ ಅವರು ಹೊಂದಿರುವ ಆಸ್ತಿಯನ್ನು ಸಾರ್ವಜನಿಕವಾಗಿ ಘೋಷಿಸಬೇಕು. ಅವರ ಆರ್ಥಿಕ ಸ್ಥಿತಿಯನ್ನು ಬಹಿರಂಗಪಡಿಸಬೇಕು" ಎಂದು ಹೇಳಿದರು.
"ಮುಖ್ಯಮಂತ್ರಿಯವರ ಸಂಪತ್ತಿನ ಮೂಲವನ್ನು ಪ್ರಶ್ನಿಸಿದ ವಿಜಯ್, ಅದು ಕಠಿಣ ಪರಿಶ್ರಮದಿಂದ ಗಳಿಸಿದ್ದಾ ಅಥವಾ ಅಧಿಕಾರ ವಹಿಸಿಕೊಂಡ ನಂತರ ಗಳಿಸಿದ್ದಾ? ನೀವು ಅದನ್ನು ಬಹಿರಂಗವಾಗಿ ಘೋಷಿಸಬಹುದೇ? ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದಾಗಲೆಲ್ಲಾ ಎಲ್ಲಾ ಭ್ರಷ್ಟರು ನಮ್ಮ ಮೇಲೆ ಕೆಸರು ಎರಚುತ್ತಾರೆ" ಎಂದು ತಿಳಿಸಿದರು.
"ಆಡಳಿತಾರೂಢ ಡಿಎಂಕೆ ಮತ್ತು ಮುಖ್ಯಮಂತ್ರಿಗಳು ತಮ್ಮ ಅಧಿಕಾರಾವಧಿಯಲ್ಲಿ 2024-25ರಲ್ಲಿ ರಾಜ್ಯ ಎರಡಂಕಿಯ ಆರ್ಥಿಕ(ಶೇ. 11.19) ಬೆಳವಣಿಗೆ ಸಾಧಿಸಿದೆ ಎಂದು ಆಗಾಗ್ಗೆ ಹೇಳುತ್ತಿದ್ದಾರೆ. ಸ್ಟಾಲಿನ್ ಅವರ ನಿಜವಾದ ಸ್ನೇಹಿತರು ಭ್ರಷ್ಟರಾಗಿದ್ದು, ರಾಜಕೀಯ ಅವಕಾಶವಾದಿಗಳು" ಎಂದರು.