ಬೆಂಗಳೂರು, ಆ1 (Daijiworld News/RD): ಸಿಎಂ ಆಗಿ ಆಯ್ಕೆಯಾದ ಯಡಿಯೂರಪ್ಪ ಸದ್ಯ ಸಂಪುಟ ರಚನೆಯಲ್ಲಿ ತೊಡಗಿಸಿಕೊಂಡಿದ್ದು, ಇಂದು ನಾಳೆ ಎಂದು ಹೇಳುವ ಮೂಲಕ ಸಂಪುಟ ರಚನೆ ಮಾಡುವ ದಿನವನ್ನು ಮುಂದೂಡುತ್ತಿದ್ದು, ಬಿಜೆಪಿಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಪಕ್ಷಕ್ಕೆ ತಲೆನೋವು ಆರಂಭಿಸಿದೆ. ಇದರ ನಡುವೆ ಇದೀಗ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಹೈಕಮಾಂಡ್ ಶಾಕ್ ನೀಡಿದ್ದು, ಆಗಸ್ಟ8 ರ ಬಳಿಕ ಸಂಪುಟ ರಚನೆ ಮಾಡಬೇಕು ಎಂದು ತಿಳಿಸಿದ್ದಾರೆ.
ಇದೇ ವಿಚಾರದ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಮುಖ್ಯಮಂತ್ರಿಗಳು ಹೈಕಮಾಂಡ್ ಭೇಟಿಯಾಗಲು ದೆಹಲಿಯತ್ತ ಹೊರಡಲು ಸಿದ್ಧರಾಗಿದ್ದರು. ಜೊತೆಗೆ ಸಚಿವ ಸ್ಥಾನದ ಆಕಾಂಕ್ಷಿಗಳು ಸಹ ಹೈಕಮಾಂಡ್ ಮಟ್ಟದಲ್ಲಿ ಒಳಗೊಳಗೆ ಲಾಬಿ ನಡೆಸಲು ದೆಹಲಿಗೆ ಹೊರಡುವ ತಯಾರು ನಡೆಸಿದ್ದರು. ಆದರೆ ಈ ವಿಷಯ ಅರಿತು ಆಗಸ್ಟ್ 7 ರವರೆಗೂ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ರಾಜ್ಯ ನಾಯಕರು ದೆಹಲಿಗೆ ಬರೋದ ಬೇಡ ಎಂಬ ಸಂದೇಶವನ್ನು ರವಾನಿಸಿದೆ. ಇದರಿಂದ ಸಿಎಂ ಸೇರಿದಂತೆ ಎಲ್ಲರಿಗೂ ಶಾಕಿಂಗ್ ನ್ಯೂಸ್ನ್ನು ನೀಡಿದೆ.
ಮೈತ್ರಿ ಸರ್ಕಾರ ಪತನವಾದ ಬಳಕ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಇದೀಗ ಹಲವು ಶಾಸಕರಲ್ಲಿ ಸಚಿವ ಸ್ಥಾನದ ಆಸೆಯು ಚಿಗುರೊಡಿದೆ. ಇದರಿಂದಾಗಿ ಸಚಿವ ಸ್ಥಾನ ಅಲಂಕರಿಸಲು ಶಾಸಕರು ತುದಿಗಾಲಲ್ಲಿ ನಿಂತಿದ್ದು, ಸಿಎಂಗೆ ಯಾರನ್ನು ಆಯ್ಕೆ ಮಾಡುವುದು ಎಂಬ ತಲೆನೋವು ಆವರಿಸಿದೆ. ಇದರ ನಡುವೆ ತವಕಿಸುತ್ತಿದ್ದ ಆಕಾಂಕ್ಷಿಗಳಿಗೆ ಹೈಕಮಾಂಡ್ ಶಾಕ್ ನೀಡುವ ಮೂಲಕ ಬ್ರೇಕ್ ಹಾಕಿದ್ದಾರೆ.
ಆಗಸ್ಟ್ 8 ರ ಬಳಿಕವೇ ಸಂಪುಟ ರಚನೆ ಮಾಡಬೇಕು ಎಂದು ಹೈಕಮಾಂಡ್ ತಿಳಿಸಿದ್ದು ಈ ಬಗ್ಗೆ ಬಿಜೆಪಿ ಮೂಲಗಳು ತಿಳಿಸಿವೆ. ತಮ್ಮದೇ ಸಮುದಾಯದ ಆಪ್ತರ ತಲೆನೋವಾಗಿದೆ. ಯಡಿಯೂರಪ್ಪ ಕ್ಯಾಬಿನೆಟ್ ಸೇರಲು ಲಿಂಗಾಯತ ಸಮುದಾಯದ ಹಲವಾರು ಆಂಕಾಕ್ಷಿಗಳು ಇದ್ದು, ಹೀಗಾಗಿ ಯಾರಿಗೆ ಸಚಿವ ಸ್ಥಾನ ಕೊಡುವುದು, ಯಾರಿಗೆ ಬಿಡುವುದು ಅನ್ನೋ ಧರ್ಮ ಸಂಕಟ ಬಿಎಸ್ವೈಗೆ ಎದುರಾಗಿದೆ.