ನವದೆಹಲಿ, ಆ 1 (Daijiworld News/MSP): ಪಾಕಿಸ್ತಾನವು ಕುಲಭೂಷಣ್ ಜಾಧವ್ ಅವರ ಗಲ್ಲುಶಿಕ್ಷೆಯನ್ನು ಮರು ಪರಿಶೀಲಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯವು ತೀರ್ಪು ನೀಡಿದ ಬಳಿಕ ಗುರುವಾರದಂದು ಪಾಕ್ ಸರ್ಕಾರವೂ ಭಾರತದ ದೂತಾವಾಸದ ಅಧಿಕಾರಿಗಳು ಕುಲಭೂಷಣ್ ಜಾಧವ್ ಅವರನ್ನು ನಾಳೆ,(ಶುಕ್ರವಾರ) ಭೇಟಿ ಮಾಡಬಹುದು ಎಂದು ತಿಳಿಸಿದೆ.
ಪಾಕಿಸ್ತಾನದ ಈ ಧಿಡೀರ್ ಹೇಳಿಕೆಗೆ ಭಾರತ ಇಲ್ಲಿಯ ತನಕ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಜುಲೈ 19 ರಂದು ಅಂತರಾಷ್ಟ್ರೀಯ ನ್ಯಾಯಾಲಯದ 16 ಸದಸ್ಯರ ನ್ಯಾಯಪೀಠವು ಪಾಕ್ ಗೆ , ಜಾಧವ್ ಮರಣದಂಡನೆ ಶಿಕ್ಷೆಗೆ ತಡೆ ಮತ್ತು ಶಿಕ್ಷೆಯ ಮರುಪರಿಶೀಲನೆ " ಯನ್ನು ಮಾಡಲು ಆದೇಶಿಸಿತ್ತು. ಅಲ್ಲದೆ ಭಾರತ ದೂತಾವಾಸ ಸಂವಹನಕ್ಕೂ ಸಹ ಒಪ್ಪಿಗೆ ಸೂಚಿಸಿತ್ತು.
ನಿವೃತ್ತ ಭಾರತೀಯ ನೌಕಾಪಡೆಯ ಅಧಿಕಾರಿಯಾಗಿದ್ದ 49 ವರ್ಷದ ಜಾಧವ್ ಅವರನ್ನು ಪಾಕಿಸ್ತಾನವೂ 2016 ರಲ್ಲಿ ಬಂಧಿಸಿತ್ತು. ಆ ಬಳಿಕ್ ಅ 2017 ರ ಏಪ್ರಿಲ್ನಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆಯ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಮರಣದಂಡನೆ ಜಾಧವ್ ವಿಧಿಸಿತ್ತು.
ಜಾಧವ್ ಅವರನ್ನು ಬಂಧಿಸುವ ಸಂದರ್ಭ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂಬ ವಾದವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಭಾರತ ಮಂಡಿಸಿತ್ತು.