ಹೊಸದಿಲ್ಲಿ, ಆ 2(Daijiworld News/RD): ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಮುಂಚೂಣಿಯಲ್ಲಿರುವ ಸಮಾಜವಾದಿ ನಾಯಕ ಪಕ್ಷದ ಹಿರಿಯ ನಾಯಕ ಅಜಂ ಖಾನ್, ಇದೀಗ ಷಹಜಹನ್ ತಾಜ್ ಮಹಲ್ ಕಟ್ಟುವ ಬದಲು ವಿಶ್ವವಿದ್ಯಾಲಯಗಳನ್ನು ಕಟ್ಟಿಸಿದ್ದರೆ ಜಗತ್ತಿನ ಹೆಚ್ಚು ವಿದ್ಯಾವಂತ ಸಮುದಾಯಗಳಲ್ಲಿ ಮುಸ್ಲಿಂ ಸಮುದಾಯವು ಒಂದು ಆಗಿರುತ್ತಿತ್ತು.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಮೊಘಲ್ ದೊರೆಗಳು ಒಂದು ತಾಜ್ ಮಹಲ್ ನಿರ್ಮಾಣ ಮಾಡುವ ಬದಲು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಆದ್ಯತೆ ಕೊಡುತ್ತಿದ್ದರೆ 2,000 ವಿಶ್ವವಿದ್ಯಾಲಯಗಳನ್ನು ಕಟ್ಟಬಹುದಿತ್ತು, ಭಾರತವು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವತ್ತಾ ಸಾಗುತ್ತಿತ್ತು. ಜೊತೆಗೆ ಮುಸ್ಲಿಂ ಸಮುದಾಯವು ಕೂಡ ವಿಶ್ವದ ಅತ್ಯಂತ ವಿದ್ಯಾವಂತ ಸಮುದಾಯವಾಗಿರುತ್ತಿತ್ತು ಎಂದು ಉತ್ತರ ಪ್ರದೇಶದ ಮಾಜಿ ಸಚಿವ ಹೇಳಿಕೊಂಡಿದ್ದಾರೆ.
ತಾಜ್ ಮಹಲ್ ಶಿವ ಮಂದಿರವಾಗಿತ್ತು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿರುವ ಮಾತುಗಳಿಗೆ ಪ್ರತಿಕ್ರಿಯಿಸಿರುವ ಅವರು, ಶಿವ ಮಂದಿರವಾಗಿದ್ದರೆ, ಅದನ್ನು ಖಂಡಿತ ಕೆಡವಲೇಬೇಕು. ಕಟ್ಟಡಕ್ಕೆ ಮೊದಲ ಕೊಡಲಿ ಏಟು ಯೋಗಿ ಹಾಕಲಿ, ಬಳಿಕ ನಾನು ಹಾಕುತ್ತೇನೆ. ವಿಶ್ವ ಪ್ರಸಿದ್ಧ ಸ್ಮಾರಕವನ್ನು ನಾಶ ಮಾಡಲು ೧೦- ೨೦ ಸಾವಿರ ಮುಸ್ಲಿಮರನ್ನೂ ಕರೆದುಕೊಂಡು ಬರುತ್ತೇನೆ ಎಂದರು.