ಹೊಸದಿಲ್ಲಿಆ2(Daijiworld News/RD): ಉಗ್ರರೊಂದಿಗೆ ನಂಟು ಹೊಂದಿ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ, ಭಯೋತ್ಪಾದನೆಗೆ ಬೆಂಬಲ, ಪ್ರಾಯೋಜಕತ್ವ ನೀಡುವ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸಲು ಅನುವು ಮಾಡಿಕೊಡುವ ಮಹತ್ವದ ತಿದ್ದುಪಡಿ ವಿಧೇಯಕವನ್ನು ಇಂದು ಸಂಸತ್ ಅಂಗೀಕರಿಸಿದೆ.
ಭಯೋತ್ಪಾದನೆ ನಿಗ್ರಹ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಸಂಸತ್ತು ಇಂದು ಅನುಮೋದಿಸಿದ್ದು, ಇದರಿಂದಾಗಿ ಒಬ್ಬ ವ್ಯಕ್ತಿ ಉಗ್ರ ಎಂದು ತಿಳಿದ ತಕ್ಷಣ ಆತನಿಗೂ ಮತ್ತು ಬೆಂಬಲಕ್ಕೆ ನಿಂತ ಇತರರಿಗೂ, ಜೊತೆಗೆ ಸಂಘಟನೆಯ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಮುಂದಾಗಿದೆ.
ವಿಧೇಯಕವನ್ನು ಆಯ್ದ ಸದಸ್ಯರ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂಬ ಪ್ರತಿಪಕ್ಷದ ನಿರ್ಣಯವನ್ನು ರಾಜ್ಯಸಭೆ 104 ಮತಗಳಿಂದ ತಿರಸ್ಕರಿಸಿತ್ತು. ಪ್ರತಿಪಕ್ಷದ ನಿರ್ಣಯಕ್ಕೆ 85 ಮತಗಳು ಮಾತ್ರ ಬಿದ್ದಿದ್ದರಿಂದ ಸದನವು ಈ ಕಾಯ್ದೆಯನ್ನು 147 ಮತಗಳಿಂದ ಅಂಗೀಕರಿಸಿತು.
ಉಗ್ರ ಚಟುವಟಿಕೆಯ ಸಂಘಟನೆಗಳನ್ನು ನಿಷೇಧಿಸಿದ ಬಳಿಕ ಬೇರೆ ಬೇರೆ ಹೆಸರುಗಳಲ್ಲಿ ಆ ಸಂಘಟನೆಗಳು ಬೆಳೆಯುತ್ತಾ ಹೋಗುತ್ತದೆ. ದೇಶದ್ರೋಹ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಎಸಗುವ ಮತ್ತು ಅದಕ್ಕೆ ಎಲಾ ರೀತಿಯಲ್ಲಿ ಬೆಂಬಲ ನೀಡುವ ವ್ಯಕ್ತಿಗಳನ್ನು ಕೂಡ ಉಗ್ರರೆಂದು ಘೋಷಿಸುವುದು ಮುಖ್ಯವಾಗಿದೆ. ಭಯೋತ್ಪಾದಕ ಕೃತ್ಯಗಳಿಗೆ ಸಂಬಂಧಪಟ್ಟ ವಿಚಾರಣೆಗೆ ಕೂಡಲೇ ಒಳಪಡಿಸಿ ಅವರ ಆ ಕ್ಷಣವೇ ಶಿಕ್ಷೆ ನೀಡಲಾಗುತ್ತದೆ ಎಂಬುವುದು ಈ ಕಾಯ್ದೆಯು ಹೇಳುತ್ತದೆ ಸೇರಿದೆ. ಎಂದು ಅಮಿತ್ ಶಾ ಹೇಳಿದರು.