ಚಿಕ್ಕಮಗಳೂರು, ಜು 02 (Daijiworld News/MSP): ಭಾರತದ ಅತಿ ದೊಡ್ಡ ಸರಣಿ ಕಾಫಿ ಮಳಿಗೆ 'ಕೆಫೆ ಕಾಫಿ ಡೇ' ಸಾಮ್ರಾಜ್ಯ ಕಟ್ಟಿದ ಸಂಸ್ಥಾಪಕ ಕಣ್ಮರೆ ಹಾಗೂ ಸಾವಿನ ಬಳಿಕ ನೆಲಕ್ಕಚ್ಚಿರುವ ಕಾಫಿ ಡೇ ಷೇರುಗಳಿಗೆ ಮತ್ತೆ ಬಲ ತುಂಬಲು ಕಾಫಿ ನಾಡು ಚಿಕ್ಕಮಗಳೂರಿನ ಯುವಕರೇ ಮುಂದಾಗಿದ್ದಾರೆ.
ಹೌದು ನೆಚ್ಚಿನ ನಾಯಕ ಸಿದ್ದಾರ್ಥ್ ನನ್ನು ಕಳೆದುಕೊಂಡ ಅವರ ಅಭಿಮಾನಿಗಳು ಕಾಫಿ ಡೇ ಷೇರಿನ ಮೌಲ್ಯವನ್ನು ವರ್ಧಿಸಿಕೊಳ್ಳಲು ಅಭಿಯಾನವೊಂದು ಪ್ರಾರಂಭಿಸಿದ್ದಾರೆ.
ಕರುನಾಡಿನ ಸಾವಿರಾರು ಜನರಿಗೆ ಅನ್ನದಾತರಾದ ವಿ.ಜಿ ಸಿದ್ಧಾರ್ಥ್ ಅವರ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ 'ಕೆಫೆ ಕಾಫಿ ಡೇ' ಷೇರುಗಳನ್ನು ಖರೀದಿಸುವ ಮೂಲಕ ಆದರ ಖ್ಯಾತಿಯನ್ನು ಉಳಿಸಿ ಬೆಳಸುವುದು ಭಾರತಿಯರಾದ ನಮ್ಮಲ್ಲೆರ ಆದ್ಯ ಕರ್ತವ್ಯ, ಆದ್ದರಿಂದ ‘ನಮ್ಮ ಕಾಫಿ ಡೇ, ನಾನು ಸಿದ್ಧಾರ್ಥ ಅಭಿಯಾನದಲ್ಲಿ ಭಾಗಿಯಾಗಿ ಸಾಧ್ಯವಾದಷ್ಟು ಷೇರು ಖರೀದಿಸಿ ಎಂದು ಮನವಿ . ಪ್ರತಿಯೊಬ್ಬರಿಗೂ ಆದಷ್ಟು ಸಂದೇಶ ತಲುಪಿಸಿ ಅಭಿಯಾನ ಯಶಸ್ವಿಗೊಳಿಸಿ’ ಎಂಬ ಅಡಿಬರಹದಲ್ಲಿ ಈ ಅಭಿಯಾನ ಪ್ರಾರಂಭವಾಗಿದೆ .‘ನಮ್ಮ ಕಾಫಿ ಡೇ , ನಾನು ಸಿದ್ಧಾರ್ಥ.. ಕೈ ಜೋಡಿಸಿ.. ಅಭಿಯಾನ .. ಕಾಫಿ ಡೇ ಷೇರು ಕೊಂಡು ನಮ್ಮ ಘನತೆ ಎತ್ತಿ ಹಿಡಿಯೋಣ. ನಮ್ಮವರ ಋಣ ತೀರಿಸೋಣ’ ಎಂದು ಬರೆದುಕೊಂಡಿದ್ದಾರೆ.